IPL 2025 : ಐಪಿಎಲ್ 2025ರ ಮಹಾಯುದ್ಧ ಅಂತಿಮ ಹಂತಕ್ಕೆ ಕಾಲಿಟ್ಟಿದೆ. ಕೇವಲ ಎರಡನೇ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯಗಳಷ್ಟೇ ಬಾಕಿ ಉಳಿದಿವೆ. ಈ ವೇಳೆ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರ ಭವಿಷ್ಯ ನುಡಿಗಳು ಕ್ರಿಕೆಟ್ ಪ್ರೇಮಿಗಳಲ್ಲಿ ಕುತೂಹಲ ಹೆಚ್ಚಿಸಿವೆ. ಈ ಬಾರಿ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಅದ್ಭುತ ಪ್ರದರ್ಶನ ನೀಡಿದೆ. ಹೀಗಾಗಿ ಐತಿಹಾಸಿಕವಾಗಿ ಫೈನಲ್ಗೆ ಪ್ರವೇಶಿಸಿದೆ.
ಇಂದು ನಡೆಯಲಿರುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿ ಯಾಗುತ್ತಿವೆ. ಪಂದ್ಯ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯದ ವಿಜೇತ, ಜೂನ್ 3ರಂದು ಆರ್ಸಿಬಿ ವಿರುದ್ಧ ಫೈನಲ್ನಲ್ಲಿ ಸೆಣಸಾಡಲಿದೆ.
2016ರಲ್ಲಿ ಆರ್ಸಿಬಿ ಫೈನಲ್ಗೆ ಎಂಟ್ರಿ ನೀಡಿದ್ದರೂ, ಟ್ರೋಫಿ ಗೆಲ್ಲುವ ಕನಸು ತಡವಾಗಿ ಕಿತ್ತುಕೊಂಡಿದ್ದು ಸನ್ರೈಸರ್ಸ್ ಹೈದರಾಬಾದ್. ಆ ತಂಡದ ನಾಯಕ ಆಗಿದ್ದವರೇ ಡೇವಿಡ್ ವಾರ್ನರ್ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಯೊಬ್ಬರು ವಾರ್ನರ್ಗೆ — "ಈ ಸಲ ಐಪಿಎಲ್ ಟ್ರೋಫಿ ಯಾರು ಗೆಲ್ಲುತ್ತಾರೆ?" ಎಂದು ಕೇಳಿದರು. ಅದಕ್ಕೆ ವಾರ್ನರ್ ಸ್ಪಷ್ಟ ಉತ್ತರ ನೀಡಿದ್ದಾರೆ. "ನನಗನಿಸುತ್ತೆ ಈ ಬಾರಿ RCB ಚಾಂಪಿಯನ್ ಆಗಬಹುದು. ಫೈನಲ್ ಪಂದ್ಯಶ್ರೇಷ್ಠ (Man of the Match) ಆಗೋದು ಜೋಶ್ ಹೇಜಲ್ವುಡ್ ಆಗಬಹುದು ಎಂದಿದ್ದಾರೆ."