ಮೈಸೂರಿನಲ್ಲಿ ಡೆವಿಲ್ ಚಿತ್ರದ ಚಿತ್ರೀಕರಣ ಮತ್ತೆ ಪುನರಾರಂಭವಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಆರೋಪಿಯಾಗಿರುವ ದರ್ಶನ್ ಜಾಮೀನು ಪಡೆದು ಹೊರಗೆ ಬಂದಿದ್ದು, ಹಲವು ತಿಂಗಳ ನಂತರ ಸಿನಿಮಾ ಶೂಟಿಂಗ್ಗೆ ಎಂಟ್ರಿ ಕೊಟ್ಟಿದ್ದಾರೆ. ಡೆವಿಲ್ ಚಿತ್ರೀಕರಣಕ್ಕೂ ಮುನ್ನ ನಟ ದರ್ಶನ್ ಮೈಸೂರಿನ ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ. 10 ತಿಂಗಳ ಬಳಿಕ ದಾಸ ಡೆವಿಲ್ ಚಿತ್ರದ ಶೂಟಿಂಗ್ನಲ್ಲಿ ಭಾಗಿಯಾಗಿದ್ದಾರೆ. ಶೂಟಿಂಗ್ ಮುನ್ನ ನಟ ದರ್ಶನ್ ನಾಡದೇವತೆ ಚಾಮುಂಡೇಶ್ವರಿ ದರ್ಶನವನ್ನು ಪಡೆದಿದ್ದಾರೆ.
ಡೆವಿಲ್ ಶೂಟಿಂಗ್ಗೂ ಮುನ್ನ ದೇವರ ಮೊರೆ ಹೋಗಿದ್ದಾರೆ. ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದ ನಟ ದರ್ಶನ ಚಾಮುಂಡಿ ಬೆಟ್ಟದಿಂದ ನೇರವಾಗಿ ಸರ್ಕಾರಿ ಅತಿಥಿ ಗೃಹಕ್ಕೆ ಆಗಮಿಸಿದರು. ಡೆವಿಲ್ ಚಿತ್ರೀಕರಣ ರ್ಕಾರಿ ಅಥಿತಿ ಗೃಹದಲ್ಲಿ ಡೆವಿಲ್ ಶೂಟಿಂಗ್ ನಡೆಯಲಿದ್ದು, ಮಾ.12 ರಿಂದ 15 ರ ವರೆಗೆ ಶೂಟಿಂಗ್ ಅನುಮತಿ ನೀಡಲಾಗಿದೆ. ಕಾನೂನು ಸುವ್ಯವಸ್ಥೆ ಡಿಸಿಪಿ ಮುತ್ತುರಾಜ್ ರಿಂದ ಶೂಟಿಂಗ್ ಮಾಡಲು ಪರ್ಮೀಷನ್ ನೀಡಿದ್ದಾರೆ.