MOVIE : ಕೊಟ್ಟಿಯೂರು ದೇವಸ್ಥಾನಕ್ಕೆ ಭೇಟಿಕೊಟ್ಟ ದರ್ಶನ್‌

SANDLEWOOD : ಡೇವಿಲ್ ಚಿತ್ರೀಕರಣ ಮುಕ್ತಾಯದ ಬಳಿಕ ದೇವರ ಅನುಗ್ರಹ ಪಡೆಯಲು ನಟ ದರ್ಶನ್ ಟೆಂಪನ್ ರನ್ ಶುರು ಮಾಡಿದ್ದಾರೆ. ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಕೊಟ್ಟಿಯೂರು ದೇವಸ್ಥಾನಕ್ಕೆ ನಟ ದರ್ಶನ್ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದಾರೆ.

ಕೇರಳದ ಕೊಣ್ಣುರು ಸಮೀಪದಲ್ಲಿರುವ ಕೊಟ್ಟಿಯೂರು ಶಿವ ದೇವಸ್ಥಾನಕ್ಕೆ ನಟ ದರ್ಶನ್, ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ಧನ್ವೀರ್ ಕೂಡ ಸಾಥ್ ನೀಡಿದ್ದಾರೆ. ಈ ವೇಳೆ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ.

ಇನ್ನು ಕೆಲ ತಿಂಗಳ ಹಿಂದಷ್ಟೇ ನಟ ದರ್ಶನ್‌ ಕಣ್ಣೂರು ಬಳಿಯ ಶ್ರೀಕ್ಷೇತ್ರ ಮಡಾಯಿ ಕಾವು ಶ್ರೀಭಗವತೀ ದೇವಸ್ಥಾನಕ್ಕೆ ಭೇಟಿ ನೀಡಿದ್ರು. ಕುಟುಂಬ ಸಮೇತರಾಗಿ ಶತ್ರು ಸಂಹಾರ ಯಾಗ ಮಾಡಿಸಿ, ಪೂಜೆ ಸಲ್ಲಿಸಿದ್ದರು.

 

 

Author:

...
Keerthana J

Copy Editor

prajashakthi tv

share
No Reviews