ಚಿಕ್ಕನಾಯಕನಹಳ್ಳಿ:
ನಮ್ಮ ರಾಜ್ಯದಲ್ಲಿ ಅಟ್ರಾಸಿಟಿ ಕಾಯ್ದೆ ಎಷ್ಟು ಸ್ಟ್ರಾಂಗ್ ಆಗಿದ್ರು ಕೂಡ ಅಲ್ಲಲ್ಲಿ ಜಾತಿ ನಿಂದನೆ ಪ್ರಕರಣಗಳು ತೆರೆಮರೆಯಲ್ಲೇ ನಡೆಯುತ್ತಿದೆ. ಈಗ ಇಂತಹದ್ದೇ ಹೇಯ ಕೃತ್ಯ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಮಲಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸವರ್ಣೀಯ ಕುಟುಂಬಕ್ಕೆ ಸೇರಿರೋ ಸಿದ್ದರಾಮಯ್ಯ ಎಂಬುವವರು ಕಳೆದ ತಿಂಗಳು ಫೆಬ್ರವರಿ 6ರಂದು ತಮ್ಮ ತೋಟಕ್ಕೆ ಬೆಂಕಿ ಇಟ್ಟಿದ್ರು. ಆದರೆ ಅವರ ತೋಟದ ಪಕ್ಕದಲ್ಲೇ ದಲಿತ ಪ್ರಕಾಶ್ ತೋಟ ಇದ್ದು ಬೆಂಕಿಯ ಕೆನ್ನಾಲಗೆಗೆ ಇವರ ಜಮೀನಿನವರೆಗೂ ವ್ಯಾಪಿಸಿದೆ. ಇದ್ರಿಂದ ಸುಮಾರು 15 ರಿಂದ 20 ಫಸಲಿಗೆ ಬಂದಿದ್ದ ಅಡಿಕೆ ಮರಗಳು ಬೆಂಕಿಗೆ ಸುಟ್ಟು ಕರಕಲಾಗಿವೆ.
ಬೆಂಕಿ ವ್ಯಾಪಿಸಿದ್ರು ಸಿದ್ದರಾಮಯ್ಯ ಸುಮ್ಮನೆ ಇದ್ದಾರೆ. ಇದನ್ನು ದಲಿತ ಪ್ರಕಾಶ್ ಪ್ರಶ್ನಿಸಿದ್ದಕ್ಕೆ ಸವರ್ಣೀಯ ಸಿದ್ದರಾಮಯ್ಯ ಜಾತಿ ನಿಂದನೆ ಮಾಡಿ, ದೌರ್ಜನ್ಯ ಮಾಡಿದ್ದಾರಂತೆ. ಹೀಗಾಗಿ ಸಿದ್ದರಾಮಯ್ಯ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು ಮಾಡುವಂತೆ ಪೊಲೀಸರಿಗೆ ದೂರು ನೀಡಿದ್ರು ಕೂಡ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಆರೋಪ ಮಾಡಲಾಗ್ತಿದೆ. ಆದ್ದರಿಂದ ದಲಿತ ಪ್ರಕಾಶ್ ಎಂಬುವವರು ದಲಿತ ಸಂಘಟನೆಗೆ ದೂರು ನೀಡುವ ಮೂಲಕ ಅಳಲು ತೋಡಿಕೊಂಡಿದ್ದು, ಪ್ರಕಾಶ್ ಪರವಾಗಿ ದಲಿತ ಸಂಘಟನೆ ಹೋರಾಟ ಮಾಡಲು ಮುಂದಾಗಿದೆ.
ಇನ್ನು ದಲಿತರ ಮೇಲೆ ಆಗಿರೋ ಕೃತ್ಯಕ್ಕೆ ದಲಿತ ಸಂಘಟನೆ ಖಂಡಿಸಿದ್ದು, ತುಮಕೂರು ಎಸ್‌ಪಿ ಕಚೇರಿಯಲ್ಲಿ ದೂರು ದಾಖಲಿಸಿದ್ದು, ಸಿದ್ದರಾಮಯ್ಯ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿಸಿಕೊಂಡು ಕ್ರಮ ಕೈಗೊಳ್ಳುಂತೆ ಆಗ್ರಹಿಸಿದ್ರು. ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ಎಸ್‌ಪಿ ಕಚೇರಿ ಮುಂದೆ ದಲಿತ ಸಂಘಟನೆ ವತಿಯಿಂದ ಉಗ್ರ ಹೋರಾಟ ಮಾಡುವುದಾಗಿ ದಲಿತ ಸಂಘಟನೆ ಮುಖಂಡ ರಾಜೇಶ್ ಎಚ್ಚರಿಕೆ ನೀಡಿದ್ರು.
ಅಟ್ರಾಸಿಟಿ ಪ್ರಕರಣವು ತುಂಬಾ ಫವರ್‌ಫುಲ್ ಆಗಿದ್ರು ಕೂಡ ಅಲ್ಲಲ್ಲಿ ದಲಿತರ ಮೇಲೆ ದೌರ್ಜನ್ಯ ಮುಂದುವರೆಯುತ್ತಿರೋದು ವಿಪರ್ಯಾಸ. ಅಧಿಕಾರಿಗಳು ಆರೋಪವನ್ನು ಗಂಭೀರವಾಗಿ ಪರಿಗಣಿಸಿ ದೌರ್ಜನ್ಯ ಎಸಗಿದ್ದವರ ವಿರುದ್ಧ ಕ್ರಮ ಕೈಗೊಳ್ಳುತ್ತಾರಾ ಎಂದು ಕಾದುನೋಡಬೇಕಿದೆ.