ಪಾವಗಡ:
ಪಾವಗಡ ತಾಲೂಕಿನ ದವಡ ಬೆಟ್ಟ ಗ್ರಾಮದ ದಲಿತ ಕಾಲೋನಿಯಲ್ಲಿ ಸುಮಾರು ನಾಲ್ಕು ದಿನಗಳಿಂದ ಕುಡಿಯಲು, ದಿನನಿತ್ಯದ ಬಳಕೆಗೆ ನೀರು ಬಿಡ್ತಾ ಇಲ್ವಂತೆ.. ಇದ್ರಿಂದ ಇಲ್ಲಿನ ನಿವಾಸಿಗಳು ನೀರಿಗಾಗಿ ಪರಿತಪಿಸುವಂತಾಗಿದೆ. ಈ ಕಾರಣಕ್ಕೆ ಅಲ್ಲಿನ ಮಹಿಳೆಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುಂಗಭದ್ರ ಯೋಜನೆಯ ನೀರು ಬಹುತೇಕ ಗ್ರಾಮಗಳಲ್ಲಿ ಕೊಳವೆ ನಲ್ಲಿಗಳ ಮೂಲಕ ಟೆಸ್ಟಿಂಗ್ ಮಾಡಲಾಗುತ್ತಿದೆ.
ಇತ್ತೀಚಿಗೆ ಕೇಂದ್ರ ಸರ್ಕಾರದ ಅನುದಾನದಲ್ಲಿ ಮನೆಗೊಂದು ನಲ್ಲಿ ಎಂಬ ಜೆಜೆಮ್ ಯೋಜನೆ ಪೂರ್ಣಗೊಂಡಿದ್ದು, ದೇವರ ಬೆಟ್ಟ ಗ್ರಾಮದ ಗ್ರಾಮದಲ್ಲಿ ಬಹುತೇಕ ಮನೆಯ ಬಳಿ ನೀರು ಪೋಲಾಗುತ್ತಿರುವುದು ಒಂದು ಕಡೆಯಾದರೆ, ಇನ್ನೊಂದು ಕಡೆ ಕಾಲೋನಿನ ನಾಲ್ಕೈದು ದಿನಗಳಿಂದ ನೀರಿರದೆ ಪರದಾಡುತ್ತಿದ್ದಾರೆ. ಇನ್ನು ಸಮಸ್ಯೆಯನ್ನು ಪಿಡಿಓ ಗಮನಕ್ಕೆ ತಂದರು ಕ್ಯಾರೆ ಅಂತಿಲ್ಲ ಅಂತಾರೆ ಮಹಿಳೆಯರು.
ಈಗಾಗಲೇ ಬೇಸಿಗೆಯ ಬಿಸಿಗೆ ಜನ ತತ್ತರಿಸುತ್ತಿದ್ದಾರೆ. ರಾಜ್ಯಾದ್ಯಂತ ಬಿಸಿಲು ಜನರ ನೆತ್ತಿಯ ಸುಡುತ್ತಿದೆ. ನೀರಿನ ಅಭಾವ ಎದುರಾರುವ ಮುನ್ನವೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ಇನ್ನು ಪಾವಗಡ ಅಂದ್ರೆ ಮೊದ್ಲೆ ಬರುಡು ಪ್ರದೇಶ, ನೀರಿನ ಅಭಾವ ಹೆಚ್ಚಾಗಿರುವ ಪ್ರದೇಶ ಇಂತಹ ಪ್ರದೇಶದಲ್ಲಿ ನೀರಿನ ಸಮಸ್ಯೆಗೆ ಅಧಿಕಾರಿಗಳು ಮುಂದಾಗಬೇಕಿದೆ. ಆದರೆ ಅಧಿಕಾರಿಗಳು ತಲೆ ಕೆಡಿಸಿಕೊಳ್ಳದ ಕಾರಣ ಜನ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಜನರ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕಿದೆ.