ಬೆಂಗಳೂರು : ಬೆಂಗಳೂರು ಮಳೆ ನೀರಿನಲ್ಲಿ ಸರ್ಫಿಂಗ್ ಆಡುತ್ತಿರುವ ಡಿ.ಕೆ. ಶಿವಕುಮಾರ್ | ವಿಡಿಯೋ ವೈರಲ್‌

ಬೆಂಗಳೂರು : ಬೆಂಗಳೂರು ಮಹಾನಗರದಲ್ಲಿ ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯು ನಗರವಾಸಿಗಳ ಜಿವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದೆ. ಮಳೆಯ ಪರಿಣಾಮದಿಂದ ಉಂಟಾದ ಈ ಅವಾಂತರದ ಬಗ್ಗೆ ಸಾರ್ವಜನಿಕರು ತಮ್ಮ ಆಕ್ರೋಶವನ್ನು ಸಾಮಾಜಿಕ ಜಾಲತಾಣಗಳ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. ಇದೇನಾ ನಿಮ್ಮ ಗ್ರೇಟರ್ ಬೆಂಗಳೂರು?, ಇದೇನಾ ಬ್ರ್ಯಾಂಡ್ ಬೆಂಗಳೂರು? ಎಂಬ ಪ್ರಶ್ನೆಗಳು ಸಾರ್ವಜನಿಕರಲ್ಲಿ ಹರಿದಾಡ್ತಿದೆ.

ಇನ್ನು ಇನ್ಸ್ಟಾಗ್ರಾಮ್ನಲ್ಲಿ ಒಂದು ಎಡಿಟ್ ಮಾಡಲಾದ ವಿಡಿಯೋ ವೈರಲ್ ಆಗಿದ್ದು, ಆ ವಿಡಿಯೋದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ Surfboard ಮೇಲೆ ಸರ್ಫ್ ಮಾಡುತ್ತಿರುವಂತೆಯೇ  ತೋರಿಸಲಾಗಿದೆ. ಅವರ ಕೈಯಲ್ಲಿ "ಬ್ರ್ಯಾಂಡ್ ಬೆಂಗಳೂರು" ಎಂದು ಬರೆದ ಪ್ಲೇಕಾರ್ಡ್ ಇದೆ. ಇನ್ನು ಈ ವಿಡಿಯೋಗೆ ಹಾಕಲಾದ ಕ್ಯಾಪ್ಷನ್ ಹೆಚ್ಚು ವಿವಾದಕ್ಕೀಡಾಗಿದೆ. ಇನ್ನು ಈ ವಿಡಿಯೋವನ್ನು ಎಐ ತಂತ್ರಜ್ಞಾನ ಸಹಾಯದಿಂದ ಎಡಿಟ್ ಮಾಡಲಾಗಿದ್ದು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ಲೇ ಕಾರ್ಡ್ ಹಿಡಿದು ಸರ್ಫ್ ರೇಡ್ ಮಾಡುತ್ತಿರುವಂತೆ ಎಡಿಟ್ ಮಾಡಲಾಗಿದೆ. ಪ್ಲೇ ಕಾರ್ಡ್ನಲ್ಲಿ ಬ್ರ್ಯಾಂಡ್ ಬೆಂಗಳೂರು ಅಂತ ಬರೆಯಲಾಗಿದೆ. ಇನ್ನು ಈ ಪೋಸ್ಟ್ಗೆ ಕ್ಯಾಪ್ಷನ್ ಬರೆಯಲಾಗಿದ್ದು, “ಸರ್ಫ್ ರೈಡ್ ಅನುಭವ ಪಡೆಯಲು ಬೆಂಗಳೂರಿನ ಜನರು ಕರಾವಳಿಗೆ ಹೋಗುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಸರ್ಕಾರವು ತನ್ನ ಪ್ರೀತಿಯ ಸ್ನೇಹಿತ ಪಾಕಿಸ್ತಾನದ ಕನಸು ಬೆಂಗಳೂರು ಪೋರ್ಟ್ ಅನ್ನು ನನಸು ಮಾಡುತ್ತಿದೆ” ಎಂದು ಕ್ಯಾಪ್ಷನ್ ಬರೆಯಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

 

 

Author:

...
Keerthana J

Copy Editor

prajashakthi tv

share
No Reviews