ತಿಪಟೂರು : ಗುತ್ತಿಗೆದಾರರ ಬೇಜಬ್ದಾರಿಯಿಂದ ಅದೆಷ್ಟೋ ಕಾಮಗಾರಿಗಳು ನೆಲಕಚ್ಚಿರೋದು ಆಗ್ಗಾಗೆ ಕಂಡು ಬರ್ತಿರುತ್ತೆ. ಈಗ ಅಂತಹದ್ದೇ ಅವೈಜ್ಞಾನಿಕ ಕಾಮಗಾರಿಗೆ ತಿಪಟೂರು ನಗರಸಭೆ ಸಾಕ್ಷಿಯಾಗಿದೆ. ಹೌದು ತಿಪಟೂರು ನಗರದ ರೈಲ್ವೆ ಅಂಡರ್ ಪಾಸ್ ಮೇಲ್ಭಾಗದಲ್ಲಿ ಅಳವಡಿಸಿದ್ದ ಪೆನ್ಸಿಲಿಂಗ್ ಮೆಸ್ ಕಾಮಗಾರಿ ಪೂರ್ಣಗೊಂಡ ಮೂರೇ ದಿನಕ್ಕೆ ಕಿತ್ತು ಬಂದಿದೆ.
ತಿಪಟೂರು ರೈಲ್ವೆ ಅಂಡರ್‌ಪಾಸ್ ಮೇಲ್ಭಾಗದಲ್ಲಿ ಸುಮಾರು 7 ಲಕ್ಷ ವೆಚ್ಚದಲ್ಲಿ ಪೆನ್ಸಿಲಿಂಗ್ ಮೆಸ್‌ನನ್ನು ಅಳವಡಿಸಲಾಗಿದೆ. ಆದ್ರೆ ಕಾಮಗಾರಿ ಮುಗಿದು ಕೇವಲ ಮೂರು ದಿನ ಮಾತ್ರ ಆಗಿತ್ತು. ಇದ್ದಕ್ಕಿದ್ದ ಹಾಗೆ ಪೆನ್ಸಿಲಿಂಗ್ ಮೆಸ್ ಕಿತ್ತು ಬಂದಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಸ್ಥಳದಲ್ಲಿ ಕಳಪೆ ಕಾಮಗಾರಿ ನಡೆದಿದ್ದು ಅಧಿಕಾರಿಗಳ ನಿರ್ಲಕ್ಷ ಎದ್ದು ಕಾಣಿಸುತ್ತಿದ. ಇದನ್ನು ಪ್ರಶ್ನೆ ಮಾಡಿದಲ್ಲಿ ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಿದ್ದಾರೆ ಹಾಗೂ ಪ್ರಿನ್ಸಿಲಿಂಗ್ ಮೆಸ್ ಕಳಚಿ ಕೆಳಗೆ ವಾಹನ ಸವರಾದಗಳ ಮೇಲೆ ಬಿದ್ದಿದ್ದರೆ ಅತಿ ದೊಡ್ಡ ಅನಾಹುತ ಆಗುತ್ತೆ ಎಂದು ಸ್ಥಳೀಯರಾದ ಇಮ್ರಾನ್ ಆಕ್ರೋಶ ಹಿರಹಾಕಿದ್ರು.
ಅದ್ಯಾವಾಗ ಜನರ ಆಕ್ರೋಶ ಹೆಚ್ಚಾಯ್ತೋ ಸ್ಥಳಕ್ಕೆ ಪೌರಾಯುಕ್ತ ವಿಶ್ವೇಶ್ವರ್ ಬದರಗಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಕೂಡಲೇ ಪೆನ್ಷಿಲಿಂಗ್ ಮೆಸ್‌ನನ್ನು ಸರಿಪಡಿಸುವಂತೆ ಖಡಕ್ ಸೂಚನೆ ನೀಡಿದ್ರು.
ಅದೇನೆ ಆಗಲಿ ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಅಮಾಯಕ ಜೀವಗಳು ಬಲಿಯಾಗ್ತಿದ್ದು, ಇನ್ನಾದ್ರು ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಎಚ್ಚರದಿಂದ ಕಾಮಗಾರಿಯನ್ನಯನ್ನು ಮುಗಿಸಿ ಜನರ ಜೀವವನ್ನು ಉಳಿಸಬೇಕಿದೆ.