ಚಿತ್ರದುರ್ಗ: 34 ಲಕ್ಷ ರೂ ವಂಚಿಸಿದ್ದ ಮೂವರು ಆರೋಪಿಗಳ ಬಂಧನ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಚಿತ್ರದುರ್ಗ

ಚಿತ್ರದುರ್ಗ:

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭಗಳಿಸಬಹುದು ಎಂದು ನಂಬಿಸಿ 34 ಲಕ್ಷ ರೂ ವಂಚಿಸಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ಚಿತ್ರದುರ್ಗದ ಸೈಬರ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

2024 ಅಕ್ಟೋಬರ್‌ ನಿಂದ ನವೆಂಬರ್‌ 14 ರ ವೇಳೆ ಗೋಲ್ದ್‌ ಸ್ಟಾಕ್‌ ಇನ್ವೆಸ್ಟರ್‌ ಎಂಬ ವಾಟ್ಸ್ಯಾಪ್‌ ಗ್ರೂಪ್‌ ರಚಿಸಿಕೊಂಡು ಹಣ ಹೂಡಿಕೆಮಾಡಿ ಹೆಚ್ಚಿನ ಲಾಭಗಳಿಸಬಹುದು ಎಂದು ನಂಬಿಸಿ ಚಿತ್ರದುರ್ಗ ನಗರದ ಸೈಯದ್‌ ಸಿರಾಜ್‌ ಬಂಡಿ ಅವರ ಖಾತೆಗಳಿಂದ ಒಟ್ಟು 34 ಲಕ್ಷ ರೂ ಹಣವನ್ನು ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿರುವ ಬಗ್ಗೆ ಚಿತ್ರದುರ್ಗ ಸೈಬರ್‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.    

ದೂರು ದಾಖಲಿಸಿಕೊಂಡ ಸೈಬರ್ ಠಾಣಾ ಪೊಲೀಸರು ವಾಟ್ಸ್ಯಾಪ್‌ ಗ್ರೂಪ್‌ ಹೆಸರು ಹಾಗೂ ನಂಬರಿನ ಜಾಡು ಹಿಡಿದು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ಉಡುಪಿ ಜಿಲ್ಲೆ ಕಾರ್ಕಳದ ಫೃಥ್ವೀಶ್‌, ಚಿಕ್ಕಮಗಳೂರು ಜಿಲ್ಲೆ ಕೊಪ್ಪದ ಕೆಳಕುಳಿ ಗ್ರಾಮದ ಕೆ.ಎನ್‌ ನಂದೀಶ್‌ ಹಾಗೂ ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಕೆಲಸ ಮಾಡಿಕೊಂಡಿದ್ದ ಉಮರ್‌ ಫಾರೂಕ್‌ ಎಂಬುವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 3 ಮೊಬೈಲ್‌, 4.50 ಲಕ್ಷ ಮೌಲ್ಯದ ಕಾರು ವಶಪಡಿಸಿಕೊಳ್ಳಲಾಗಿದೆ.           

 

 

Author:

share
No Reviews