ಚಿಂತಾಮಣಿ : ಉನ್ನತ ಶಿಕ್ಷಣ ಸಚಿವರ ಕ್ಷೇತ್ರದಲ್ಲೇ ಟೀಚರ್ ದರ್ಪ ...!

ಬಾಲಕ ಯಶ್ವಂತ್
ಬಾಲಕ ಯಶ್ವಂತ್
ಚಿಕ್ಕಬಳ್ಳಾಪುರ

ಚಿಂತಾಮಣಿ :

ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್‌ ಅವರ ಕ್ಷೇತ್ರದಲ್ಲೇ ಬಾಲಕನ ಮೇಲೆ ಟೀಚರ್‌ ದರ್ಪ ತೋರಿರುವ ಅಮಾನವೀಯ ಘಟನೆ ನಡೆದಿದೆ. ಟೀಚರ್‌ ಥಳಿಸಿದ್ದಕ್ಕೆ ಬಾಲಕ ಕಣ್ಣೇ ಕಳೆದುಕೊಂಡಿದ್ದಾನೆ. ಈ ಅಮಾನವೀಯ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಮುರುಗಮಲ್ಲ ಹೋಬಳಿ ವ್ಯಾಪ್ತಿಯ ಯಗವಕೋಟೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ.

ಯಗವಕೋಟೆ ಗ್ರಾಮದ ನಟರಾಜ್‌- ಅಂಜಲಿ ದಂಪತಿಯ 8 ವರ್ಷದ ಪುತ್ರ ಯಶ್ವಂತ್‌ ಸರ್ಕಾರಿ ಶಾಲೆಯಲ್ಲಿ ಒಂದನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಶಾಲೆಯ ಶಿಕ್ಷಕಿ ಸರಸ್ವತಿ ಎಂಬುವವರು ಕೋಲಿನಿಂದ ಬಾಲಕನಿಗೆ ಹೋಡೆಯಲು ಹೋಗಿದ್ದು, ಆಕಸ್ಮಿಕವಾಗಿ ಯಶ್ವಂತ್‌ ಕಣ್ಣಿಗೆ ಬಿದ್ದಿದೆ. ಯಶ್ವಂತ್‌ ಬಲಗಣ್ಣಿಗೆ ಕೋಲಿನಿಂದ ಬಲವಾಗಿ ಏಟು ಬಿದ್ದಿದ್ದು, ಕೂಡಲೇ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆದರೆ ಚಿಕಿತ್ಸೆ ಬಳಿಕ ಬಾಲಕನ ಕಣ್ಣಿಗೆ ಹಾನಿಯಾಗಿದ್ದು, ಕಣ್ಣು ಕಾಣುವುದಿಲ್ಲ ಎಂದು ದೃಢೀಕರಿಸಿದ್ದಾರೆ. ಬಾಲಕನ ಕಣ್ಣಿಗೆ ಹಾನಿಯಾಗಿದ್ದರಿಂದ ಪೋಷಕರು ಕಂಗಾಲಾಗಿದ್ದಾರೆ.

ಕೂಡಲೇ ಪೋಷಕರು ಶಿಕ್ಷಕಿ ಸರಸ್ವತಿ ವಿರುದ್ಧ ಪೊಲೀಸ್‌ ಠಾಣೆಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಆದರೆ ದೂರು ನೀಡಿದರೂ ಕೂಡ ಯಾವುದೇ ಕ್ರಮ ಕೈಗೊಳ್ಳದಿರುವ ಹಿನ್ನೆಲೆ ಇಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಬಾಲಕನ ಪೋಷಕರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ  ಶಿಕ್ಷಕಿಯ ಮೇಲೆ ಕ್ರಮ ಜರುಗಿಸುವವರೆಗೂ ಕಾನೂನು ಹೋರಾಟ ಮಾಡುವುದಾಗಿ ಪೋಷಕರು ತಿಳಿಸಿದ್ದಾರೆ.

Author:

...
Editor

ManyaSoft Admin

share
No Reviews