ಚಿಕ್ಕನಾಯಕನಹಳ್ಳಿ :
ವೃದ್ದೆಯೋರ್ವರು ಮನೆಯೊಳಗೆ ಎಂಟ್ರಿಕೊಟ್ಟಿದ್ದ ನಾಗರಹಾವನ್ನು ಬರೀಗೈಯಲ್ಲೇ ಹಿಡಿದಿದ್ದಲ್ಲದೇ, ಅದನ್ನು ಹೆಗಲ ಮೇಲೆ ಹಾಕಿಕೊಂಡು ಹೋಗಿ, ಕೊನೆಗೆ ತೆಂಗಿನಮರಕ್ಕೆ ಬೀಸಿ ಹೊಡೆದು ಸಾಯಿಸಿಬಿಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬೆಳಗುಲಿ ಬೆಟ್ಟದ ಮನೆಯಲ್ಲಿ ನಡೆದಿದೆ.
ಭಾರೀ ಗಾತ್ರದ ನಾಗರಹಾವೊಂದು ಮನೆಯೊಳಗೆ ಕಾಣಿಸಿಕೊಂಡಿತ್ತು. ಹಾವನ್ನು ಸೆರೆಹಿಡಿಯುವ ಸಲುವಾಗಿ ಕೆಲವರು ಉರಗರಕ್ಷಕರಿಗೆ ಕರೆ ಮಾಡ್ತಿದ್ರೆ, ಇನ್ನು ಕೆಲವರು ದೊಣ್ಣೆಯನ್ನು ಹುಡುಕ್ತಾ ಇದ್ದರು. ಆದರೆ ಈ ವೇಳೆ ಸೀದಾ ಮನೆಯೊಳಗೆ ಎಂಟ್ರಿಕೊಟ್ಟ ವೃದ್ದೆಯೊಬ್ಬರು ನಾಗರಹಾವನ್ನು ಬರೀಗೈಯಲ್ಲೇ ಹಿಡಿದು ಹೆಗಲ ಮೇಲೆ ಹಾಕಿಕೊಂಡು ಹೊರತಂದಿದ್ದಾಳೆ. ಅಜ್ಜಿಯ ಈ ವೀರಾವೇಷವನ್ನು ಕಂಡು ಅಲ್ಲಿದ್ದವರು ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ. ಇನ್ನು ಅಲ್ಲಿದ್ದವರೆಲ್ಲಾ ನೋಡ್ತಾ ನೋಡ್ತಾ ಇದ್ದಂತೆಯೇ ಆ ವೃದ್ಧೆ ಹೆಗಲ ಮೇಲೆ ಹಾಕಿಕೊಂಡಿದ್ದ ನಾಗರಹಾವನ್ನು ಅಲ್ಲಿಯೇ ಇದ್ದ ತೆಂಗಿನ ಮರಕ್ಕೆ ಬೀಸಿ ಹೊಡೆದು ಸಾಯಿಸಿದ್ದಾರೆ.
ಎರಡು ಮೂರು ಬಾರಿ ನಾಗರಹಾವನ್ನು ತೆಂಗಿನ ಮರಕ್ಕೆ ಬೀಸಿ ಹೊಡೆದ ವೃದ್ಧೆ, ನಂತರ ಆ ಹಾವನ್ನು ನೆಲದ ಮೇಲೆ ಇಟ್ಟುಕೊಂಡು ಹಾವಿನ ತಲೆಯ ಮೇಲೆ ಜಜ್ಜಿ ಜಜ್ಜಿ ಸಾಯಿಸಿದ್ದಾಳೆ. ಮುದುಕಿಯ ರೋಷಾವೇಷವನ್ನು ಕಂಡು ಅಲ್ಲಿದ್ದ ಜನ ಒಂದು ಕ್ಷಣ ಶಾಕ್ ಆಗಿದ್ದಾರೆ.