ಚಿಕ್ಕನಾಯಕನಹಳ್ಳಿ:
ಬಿರು ಬೇಸಿಗೆ ಆರಂಭಕ್ಕೂ ಮುನ್ನವೇ ಸುಡುವ ಬಿಸಿಲಿಗೆ ಹೆದರಿರುವ ಜನತೆ ಮಳೆಗಾಗಿ ಮಳೆರಾಯನ ಪ್ರಾರ್ಥನೆ ಮಾಡ್ತಾ ಇದಾರೆ. ಅಲ್ಲದೇ ಮಳೆಗಾಗಿ ಹಲವು ಹಳ್ಳಿಗಳಲ್ಲಿ ಹಿಂದಿನ ಕಾಲದಿಂದಲೂ ವಿಶೇಷ ಪೂಜೆ ಆಚರಣೆಗಳನ್ನ ಮಾಡ್ತಿದ್ದು, ಅದೇ ರೀತಿ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಸಿಂಗಾಪುರ ಗ್ರಾಮದಲ್ಲಿ ಗ್ರಾಮಸ್ಥರೆಲ್ಲ ಸೇರಿ ಮಳೆ ಬರಲೆಂದು ಚಂದಮಾಮನ ಮದುವೆ ಮಾಡಿಸಿದ್ದಾರೆ.
ಗ್ರಾಮದಲ್ಲಿ ಉತ್ತಮ ಮಳೆ ಆಗಲೆಂದು ಹಿಂದಿನ ಕಾಲದಿಂದ ನಡೆಸುತ್ತಿರೋ ಸಂಪ್ರದಾಯದಂತೆ ಗ್ರಾಮಸ್ಥರೆಲ್ಲ ಸೇರಿ ಮಕ್ಕಳಿಗೆ ಮದುವೆ ಮಾಡಿಸಿದ್ದಾರೆ, ವಿಶೇಷ ಅಂದರೆ ಮದುವೆಯ ವರ, ವಧು ಇಬ್ರು ಗಂಡು ಮಕ್ಕಳೇ ಆಗಿದ್ದು, ಹುಡುಗನಿಗೆ ವಧುವಿಗೆ ಅಲಂಕರಿಸುವಂತೆ ಸೀರೆ, ಕುಪ್ಪಸ, ಬಳೆ ತೊಡಿಸಿ ಶೃಂಗರಿಸಿದ್ದಾರೆ. ಇನ್ನು ಮಕ್ಕಳಿಗೆ ಮದುವೆ ಮಾಡ್ಸಿದಲ್ಲದೇ ಭರ್ಜರಿ ಮದುವೆ ಊಟ ಸಹ ಹಾಕ್ಸಿದ್ದಾರೆ. ಗ್ರಾಮಕ್ಕೆ ಉತ್ತಮ ಮಳೆಯಾಗಲೆಂದು ವರುಣ ದೇವನನ್ನು ಪ್ರಾರ್ಥಿಸಿದರು. ಇನ್ನು ಈ ರೀತಿ ಮಕ್ಕಳ ಮದುವೆ ಮಾಡಿದರೆ ಮಳೆಯಾಗುತ್ತೇ ಅನ್ನೋದು ಇಲ್ಲಿನ ಜನರ ನಂಬಿಕೆಯಾಗಿದೆ.