ಚಿಕ್ಕನಾಯಕನಹಳ್ಳಿ : ಬಡಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಪೋಷಣೆಗೆಂದು ಅಂಗವಾಡಿ ಕೇಂದ್ರಗಳನ್ನು ನಡೆಸಲಾಗ್ತಿದೆ. ಆದರೆ ಕೆಲವೊಂದು ಅಂಗನವಾಡಿ ಕೇಂದ್ರಗಳು ಕೆಟ್ಟ ಸ್ಥಿತಿಯಲ್ಲಿವೆ. ಆ ಸ್ಥಿತಿಯಲ್ಲಿ ಚಿಕ್ಕನಾಯಕನಹಳ್ಳಿ ಪಟ್ಟಣ ಹೊರತಾಗಿಲ್ಲ. ಚಿಕ್ಕನಾಯಕನಹಳ್ಳಿ ಪಟ್ಟಣದ ಉಡೇವು ಬೀದಿಯಲ್ಲಿರೋ ಅಂಗನವಾಡಿ ಕೇಂದ್ರದಲ್ಲಿ ಮೂಲಭೂತ ಸೌಕರ್ಯವಿಲ್ಲದೇ ಮಕ್ಕಳು ಪರದಾಡುವಂತಾಗಿದೆ. ಈ ಅಂಗನವಾಡಿ ಕೇಂದ್ರದಲ್ಲಿ ಸುಮಾರು 30 ಮಂದಿ ಮಕ್ಕಳು ಇದ್ದು, ಮಕ್ಕಳಿಗೆ ಮೂಲಭೂತ ಸೌಕರ್ಯ ಸಿಕ್ತಾ ಇಲ್ಲ.
ಇನ್ನು ಉಡೇವು ಬೀದಿಯಲ್ಲಿರೋ ಅಂಗನವಾಡಿ ಕೇಂದ್ರ ಶಿಥಿಲಗೊಂಡಿದ್ದು, ಕಳೆದ ಮೂರು ವರ್ಷಗಳಿಂದ ಖಾಸಗಿ ಕಟ್ಟಡದಲ್ಲಿ ಅಂಗನವಾಡಿಯನ್ನು ನಡೆಸಲಾಗ್ತಿದೆ. ಈ ಬಾಡಿಗೆ ಕಟ್ಟಡದಲ್ಲಿ ಮಕ್ಕಳಿಗೆ ಬೇಕಾದ ಶೌಚಾಲಯ, ಶುದ್ಧ ಕುಡಿಯುವ ನೀರು, ಕ್ರೀಡಾ ಸಾಮಗ್ರಿಗಳು ಸೇರಿದಂತೆ ಯಾವುದೇ ಮೂಲಭೂತ ಸೌಲಭ್ಯಗಳು ಇಲ್ಲ. ಹೀಗಾಗಿ ಮಕ್ಕಳು ಮೂತ್ರ ವಿಸರ್ಜನೆಗೆ ರಸ್ತೆ ಬದಿಗೆ ತೆರಳುತ್ತಿದ್ದು, ವಾಹನಗಳು ಗುದ್ದುವ ಆತಂಕದಲ್ಲಿ ಪೋಷಕರಿದ್ದಾರೆ.
ಇನ್ನು ಮಳೆಯಲ್ಲೂ ಬಯಲಿಗೆ ಶೌಚಾಲಯಕ್ಕೆ ಹೋಗುವ ಸ್ಥಿತಿ ಇದ್ದು, ಕಾಲು ಜಾರಿ ಬೀಳುವ ಸಾಧ್ಯತೆ ಇದ್ದು, ಸಂಬಂಧಪಟ್ಟ ಇಲಾಖೆ ಹಾಗೂ ಶಾಸಕರು ಈ ಬಗ್ಗೆ ಗಮನಹರಿಸಿ ಅಂಗನವಾಡಿ ಮಕ್ಕಳ ಜೀವಕ್ಕೆ ರಕ್ಷಣೆ ಒದಗಿಸಬೇಕಿದೆ.