ಚಿಕ್ಕನಾಯಕನಹಳ್ಳಿ : 500 ಅಡಕೆ ಗಿಡಗಳ ನಾಶ.. ಅನ್ನದಾತನ ಆಕ್ರಂದನ

ಕಡಿದಿರುವ ಅಡಕೆ ಮರಗಳು
ಕಡಿದಿರುವ ಅಡಕೆ ಮರಗಳು
ತುಮಕೂರು

ಚಿಕ್ಕನಾಯಕನಹಳ್ಳಿ:

ರೈತನೋರ್ವ ಕಷ್ಟಪಟ್ಟು ಬೆಳೆಸಿದ್ದ ಅಡಕೆ ಗಿಡಗಳನ್ನು ನಾಶ ಮಾಡಿದ್ದು, ಅನ್ನದಾತ ಕಂಗಲಾಗಿದ್ದಾನೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಬರಗೂರಿನಲ್ಲಿ ಈ ಘಟನೆ ನಡೆದಿದೆ. ರೈತ ಗಣೇಶ್‌ ಎಂಬುವವರಿಗೆ ಸೇರಿದ ಅಡಕೆ ಮರಗಳನ್ನು ಕಿಡಿಗೇಡಿಗಳು ರಾತ್ರೋ ರಾತ್ರಿ ಕತ್ತರಿಸಿದ್ದಾರೆ. ಭಾನುವಾರ ರಾತ್ರಿ ಈ ದುಷ್ಕೃತ್ಯ ಜರುಗಿದ್ದು, ಬೆಳಗ್ಗೆ ತೋಟಕ್ಕೆ ಬಂದಾಗ ಗಿಡಗಳು ಕಡಿದಿರುವುದು ತಿಳಿದುಬಂದಿದೆ.

ಸುಮಾರು 10 ವರ್ಷಗಳ ಹಳೆಯ ಅಡಕೆ ಮರಗಳು ಫಸಲಿಗೆ ಬಂದಿದ್ದು ಲಕ್ಷಾಂತರ ರೂಪಾಯಿ ವರಮಾನವನ್ನು ತಂದು ಕೊಡುತ್ತಿತ್ತು. ಆದರೆ ರಾತ್ರೋ ರಾತ್ರಿ ಬಂದ ಕಿಡಿಗೇಡಿಗಳು ಅಡಕೆ ಮರಗಳನ್ನು ನಾಶ ಮಾಡಿ ಹೋಗಿದ್ದಾರೆ. ಇದರಿಂದ ಕಂಗಾಲಾದ ರೈತನ ಆಕ್ರಂದನ ಮುಗಿಲು ಮುಟ್ಟಿತ್ತು. ಇನ್ನು ಅಡಿಕೆ ಮರಗಳನ್ನು ಕಡಿದಿರುವ ಬಗ್ಗೆ ರೈತನಿಗೆ ನಿಖರವಾದ ಮಾಹಿತಿ ಸಿಕ್ಕಿಲ್ಲ, ಈ ಸಂಬಂಧ ಹಂದನಕೆರೆ ಪೊಲೀಸ್‌ ಠಾಣೆಯಲ್ಲಿ ರೈತ ದೂರು ದಾಖಲಿಸಿದ್ದು ಕಿಡಿಗೇಡಿಗಳನ್ನು ಪತ್ತೆ ಹಚ್ಚಿ, ಬಂಧಿಸುವಂತೆ ಆಗ್ರಹಿಸಿದರು. ಅಲ್ಲದೇ ಬೆಳೆ ನಾಶಕ್ಕೆ ಸರ್ಕಾರ ಪರಿಹಾರ ನೀಡುವಂತೆ ಒತ್ತಾಯಿಸಿದರು.

Author:

...
Editor

ManyaSoft Admin

Ads in Post
share
No Reviews