ಚಿಕ್ಕಬಳ್ಳಾಪುರ :
ಸರ್ಕಾರಿ ಜಮೀನು ವಿಚಾರವಾಗಿ ತಹಶೀಲ್ದಾರ್ ಗಮನಕ್ಕೆ ತಂದರೂ ಕೂಡ ಇದುವರೆಗೂ ಮನೆಗಳಿಗೆ ಹಕ್ಕು ಪತ್ರಗಳನ್ನು ವಿತರಣೆ ಮಾಡ್ತಿಲ್ಲ ಎಂದು ಚಿಕ್ಕಬಳ್ಳಾಪುರ ತಾಲೂಕಿನ ಗುಂಡ್ಲುಗುರ್ಕಿ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಗುಂಡ್ಲುಗುರ್ಕಿ ಗ್ರಾಮದ ಸರ್ಕಾರಿ ಜಮೀನಿನಲ್ಲಿ ಸುಮಾರು 30ಕ್ಕೂ ಹೆಚ್ಚು ಕುಟುಂಬಗಳು ಅಧಿಕ ಮನೆಗಳನ್ನು ಕಟ್ಟಿಕೊಂಡ್ಡಿದರು. ಕಳೆದ ಒಂದು ವರ್ಷದ ಹಿಂದೆ ಸ್ಥಳ ಪರಿಶೀಲನೆ ಮಾಡುವಂತೆ ತಹಶೀಲ್ದಾರ್ ಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ಮನವಿ ಬಳಿಕ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹಕ್ಕು ಪತ್ರಗಳನ್ನು ವಿತರಣೆ ಮಾಡೋದಾಗಿ ತಿಳಿಸಿದ್ದಾರೆ, ಆದರೆ ಅದೇ ಜಾಗಗಳಲ್ಲಿ ಈಗ ಉಳ್ಳವರು ಮನೆಗಳನ್ನು ನಿರ್ಮಿಸಲು ಮುಂದಾಗಿದ್ದು, ಸುಮಾರು 15 ವರ್ಷಗಳಿಂದ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರೋ ಬಡ ಕುಟುಂಬಗಳಿಗೆ ದಿಕ್ಕೇ ತೋಚದಂತಾಗಿದೆ.
ಹೌದು ಬಾಡಿಗೆ ಮನೆಗಳಲ್ಲಿ ವಾಸಿಸೋತ್ತಿರೋ ಬಡ ಕುಟುಂಬಗಳಿಗೆ ಒಂದು ವರ್ಷದ ಹಿಂದೆ ತಹಶೀಲ್ದಾರ್ ಗುಂಡ್ಲುಗುರ್ಕಿ ಗ್ರಾಮಕ್ಕೆ ಭೇಟಿ ನೀಡಿ, 2 ಎಕರೆ ಪುರದಗಡ್ಡಗೆ ಇನ್ನುಳಿದ ಜಾಗ ಮಂಚನಬೆಲೆ ಗ್ರಾಮ ಪಂಚಾಯ್ತಿಗೆ ಸೇರಿದೆ ಎಂದು ಹೇಳೀದರಂತೆ, ಆದರೆ ಇಲ್ಲಿ ಬಡ ಕುಟುಂಬದ ಫಲಾನುಭವಿಗಳಿಗೆ ಯಾವುದೇ ಅನುಕೂಲ ಆಗ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸ್ತಾ ಇದಾರೆ. ಇನ್ನು ತಮಗೆ ನೀಡಿದ್ದ ಜಾಗದಲ್ಲಿ ಬೇರೆಯವರು ಮಣ್ಣು ಹೊಡೆಸಿದ್ದು ಯಾರು ಎಂದು ತಿಳಿಯುತ್ತಿಲ್ಲ , ಅಲ್ಲದೇ ಪಕ್ಕದ ಜಮೀನಿನವರು ಜಾಗ ಒತ್ತುವರಿ ಮಾಡಿಕೊಂಡಿದ್ದು, ಕೂಡಲೇ ಒತ್ತುವರಿ ತೆರವುಗೊಳಿಸಿ ನಮಗೆ ಸಿಗಬೇಕಾದ ಜಾಗ ನೀಡಬೇಕು ಎಂದು ಗ್ರಾಮಸ್ಥರು ಮನವಿ ಮಾಡ್ತಿದ್ದಾರೆ.
ಸದ್ಯ ಆಶ್ರಯ ಬಡಾವಣೆ ಯೋಜನೆಯಲ್ಲಿ ಸ್ಥಳ ಗುರುತಿಸುವಂತೆ ತಹಶೀಲ್ದಾರ್ ಸೂಚನೆ ನೀಡಿದ್ದು, ಪಂಚಾಯ್ತಿ ಅಧಿಕಾರಿ ಮಾತ್ರ ನಮಗೇನು ಸಂಬಂಧ ಇಲ್ಲವೆಂಬತ್ತೆ ವರ್ತನೆ ತೋರುತ್ತಿದ್ದಾರೆ ಎಂಬ ಆರೋಪ ಕೇಳಿ ಬರ್ತಿದೆ, ಇನ್ನಾದರೂ ಜಿಲ್ಲಾಡಳಿತ, ತಾಲೂಕು ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಪರಿಶೀಲನೆ ನಡೆಸಿ ಬಡವರಿಗೆ ಸೂರು ಕಲ್ಪಿಸಲು ಮುಂದಾಗಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.