ಚಿಕ್ಕಬಳ್ಳಾಪುರ :
ಚಿಕ್ಕಬಳ್ಳಾಪುರದ ಸಹಕಾರ ಭವನದಲ್ಲಿ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ನೂತನ ಅಧ್ಯಕ್ಷರಾಗಿ ಹೆಚ್.ವಿ ನಾಗರಾಜು ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಆರ್. ಮುರುಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬೆಂಬಲಿಗರು ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದವರಿಗೆ ಹೂವಿನ ಹಾರ ಹಾಕಿ, ಸಿಹಿ ಸಂಚಿ ಸಂಭ್ರಮಿಸಿದರು.
ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷ ಹೆಚ್.ವಿ ನಾಗರಾಜ್, ನಾನು ಮೊದಲ ಬಾರಿಗೆ ಅಧ್ಯಕ್ಷನಾದಾಗ ಈಗಿನ ಕಟ್ಟಡಕ್ಕೆ ನಿವೇಶನ ಹುಡುಕಾಟ ಮಾಡಿ ನಿವೇಶನ ನಮ್ಮದಾಗಿಸಿಕೊಂಡಿದ್ದೆ. ಎರಡನೇ ಬಾರಿಗೆ ಆಯ್ಕೆಯಾದಾಗ ಎರಡು ಹಂತಸ್ತಿನ ಕಚೇರಿ ಕಾಂಪ್ಲೆಕ್ಸ್ ನಿರ್ಮಿಸಲಾಗಿದೆ. ಮೂರನೇ ಬಾರಿಗೆ ಈಗ ಅಧ್ಯಕ್ಷನಾಗಿದ್ದು, ನಮ್ಮಲ್ಲಿ ಇನ್ನೂ ಹತ್ತು ಲಕ್ಷ ಅನುದಾನ ಇದೆ ಅದರ ಜತೆಗೆ ಜನಪ್ರತಿನಿದಿಗಳ ಅನುದಾನ ಬಳಸಿಕೊಂಡು ಇನ್ನೊಂದು ಕಾಂಪ್ಲೆಕ್ಸ್ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ವೇಳೆ ಡಿ ಎ ಆರ್ ಶಂಕರ್ ನಾರಾಯಣ್, ನಿರ್ದೇಶಕರಾದ ಕೆ ಪಿ ಚನ್ನ ಬೈರೇಗೌಡ, ಎಲ್ ವೈ ನರಸಿಂಹರೆಡ್ಡಿ, ಟಿ ಎಲ್ ಅಂಬರೀಶ್, ಉತ್ತಿರೆಡ್ಡಿ, ಕೆ ಬಿ ರಮಣಮ್ಮ, ಪಿ ಎನ್ ವೇಣುಗೋಪಾಲ್ ಸೇರಿ ಹಲವರು ಉಪಸ್ಥಿತರಿದ್ದರು.