ರಾಜ್ಯ : 2025ರ CET ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್. 2025ರ CET ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್ ಇದು. ನಾಳೆ ಬೆಳಗ್ಗೆ 11.30ಕ್ಕೆ UG CET-2025 ಫಲಿತಾಂಶ ಪ್ರಕಟ ಮಾಡುವ ಮುಹೂರ್ತ ಫಿಕ್ಸ್ ಆಗಿದೆ. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್ ಅವರು ಕೆಇಎ ಕಚೇರಿಯಲ್ಲಿ ಸಿಇಟಿ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟ ಮಾಡಲಾಗಿದ್ದಾರೆ.
ಈ ಅಧಿಕೃತ ಪ್ರಕಟಣೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಚೇರಿಯಲ್ಲಿ ನಡೆಯಲಿದ್ದು, ಅದಾದ ಬಳಿಕ ನಾಳೆ ಮಧ್ಯಾಹ್ನ 2 ಗಂಟೆಗೆ ಫಲಿತಾಂಶವನ್ನು ಅಧಿಕೃತ ವೆಬ್ಸೈಟ್ಗಳಲ್ಲಿ ಪರಿಶೀಲಿಸಬಹುದಾಗಿದೆ.
ಫಲಿತಾಂಶ ನೋಡಬಹುದಾದ ವೆಬ್ಸೈಟ್:
https://cetonline.Karnataka.gov.in/ugcetrank2025/checkresult.aspx https://karresults.nic.in
ಪರೀಕ್ಷಾ ವಿವರಗಳು:
CET-2025 ಪರೀಕ್ಷೆಯನ್ನು ಕಳೆದ ಏಪ್ರಿಲ್ 15, 16 ಮತ್ತು 17ರಂದು ರಾಜ್ಯದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಯಶಸ್ವಿಯಾಗಿ ನಡೆಸಲಾಗಿತ್ತು. ಫಲಿತಾಂಶವನ್ನು ಕುರಿತು ಮಾಹಿತಿ ನೀಡಿದ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು, ಎಲ್ಲಾ ತಂತ್ರಜ್ಞಾನಾತ್ಮಕ ತಯಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಅಥವಾ ಹಾಲ್ ಟಿಕೆಟ್ ನಂಬರನ್ನು ಬಳಸಿ ಈ ಫಲಿತಾಂಶವನ್ನು ಪರಿಶೀಲಿಸಬಹುದಾಗಿದೆ. ತಾಂತ್ರಿಕ ತೊಂದರೆಗಳಿಲ್ಲದೆ ಫಲಿತಾಂಶವನ್ನು ನೋಡಲು ಸಮಯದ ಮಿತಿಯಲ್ಲಿ ವೆಬ್ಸೈಟ್ಗಳಿಗೆ ಭೇಟಿ ನೀಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.