ಬೆಂಗಳೂರು:
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸಿಸಿಎಲ್ 2025 ಪಂದ್ಯಾವಳಿಯ ಎರಡನೇ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತೆಲುಗು ವಾರಿಯರ್ಸ್ ವಿರುದ್ಧ 46 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. ಕಳೆದ ಎರಡು ತಿಂಗಳ ಸತತ ಅಭ್ಯಾಸಕ್ಕೆ ಮೊದಲ ಪ್ರಯತ್ನದಲ್ಲಿಯೇ ಜಯ ಸಿಕ್ಕಿದೆ.
ಡಾರ್ಲಿಂಗ್ ಕೃಷ್ಣ ಮೊದಲ ಇನ್ನಿಂಗ್ಸ್ ಅಲ್ಲಿ 80 ರನ್ ಗಳಿಸಿ ಭರ್ಜರಿ ಪ್ರದರ್ಶನ ನೀಡಿದರು. ನಂತರ ಕರಣ್ ಆರ್ಯನ್ ಸ್ಪೋಟಕ ಬ್ಯಾಟಿಂಗ್ ಜೊತೆಗೆ, ಕರಣ್ ಆರ್ಯನ್‌ಗೆ ನಟ ರಾಜೀವ್ ಸಾಥ್ ಕೊಟ್ಟರು. ಎರಡನೇ ಇನ್ನಿಂಗ್ಸ್ ಅಲ್ಲಿ ತುಂಬಾನೆ ಚೆನ್ನಾಗಿ ಆಡಿದ ಈ ಆಟಗಾರರಲ್ಲಿ ಕರಣ್ ಆರ್ಯನ್ ಸಿಕ್ಸರ್ ಮತ್ತು ಫೋರ್ ಕೂಡ ಹೊಡೆದರು. ತಂಡದ ಇತರ ಸದಸ್ಯರೂ ಉತ್ತಮ ಆಟ ಪ್ರದರ್ಶನ ಮಾಡಿದ್ದಾರೆ.
ನಟ ಚಂದನ್ ಅದ್ಭುತ ಬೌಲಿಂಗ್ ಮಾಡಿದರು. ಡೈರೆಕ್ಟರ್ ಅನೂಪ್ ಭಂಡಾರಿ ಕೂಡ ಒಳ್ಳೆ ಸ್ಪಿನ್ನರ್ ಆಗಿ ಕಮಾಲ್ ಮಾಡಿದರು. ಇವರ ಬೌಲಿಂಗ್‌ಗೆ ತೆಲುಗು ವಾರಿಯರ್ಸ್ ತತ್ತರಿಸಿಹೊದ್ರು. ಆದರೆ, ತೆಲುಗು ವಾರಿಯರ್ಸ್ ತಂಡದಿಂದ ಎರಡನೇ ಇನ್ನಿಂಗ್ಸ್ ಅಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮ್ಯೂಸಿಕ್ ಡೈರೆಕ್ಟರ್ ತಮನ್ ಸಖತ್ ಆಗಿಯೇ ಆಡಿದ್ದಾರೆ. ಆದರೆ, ತಮನ್ ಔಟ್ ಆದ್ಮೇಲೆ ನಾಯಕ ಅಖಿಲ್ ಅಕ್ಕಿನೇನಿ 9 ರನ್‌ಗಳಿಸಿದರೆ ಅಶ್ವಿನ್ ಬಾಬು 15 ರನ್ ಗಳಿಸಿದರೆ ಉಳಿದ ಆಟಗಾರರು ಒಂದಂಕಿ ರನ್ ಗಳಿಸಿದರು. 10 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 91 ರನ್ ಗಳಿಸಿದ ತೆಲುಗು ವಾರಿಯರ್ಸ್ ಸೋಲೊಪ್ಪಿಕೊಂಡಿತು.
ಕಿಚ್ಚ ಸುದೀಪ್ ತಂಡ ಈ ಮೂಲಕ ಮೊದಲ ಪಂದ್ಯವನ್ನು ಗೆದ್ದು ಬೀಗಿದ್ದು. 10 ಓವರ್‌ಗಳ ಎರಡು ಇನ್ನಿಂಗ್ ಆಟದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಗೆಲುವು ಸಾಧಿಸಿದೆ. ಇದೇ ಫೆಬ್ರವರಿ 14 ರಂದು ಕರ್ನಾಟಕ ಬುಲ್ಡೋಜರ್ಸ್ ಹೈದರಾಬಾದ್‌ನಲ್ಲಿ ಚೆನ್ನೈ ರೈನೋಸ್ ವಿರುದ್ಧ ಎರಡನೇ ಪಂದ್ಯ ಆಡಲಿದೆ.