ಚಿಕ್ಕನಾಯಕನಹಳ್ಳಿ : ತುಮಕೂರಿನಲ್ಲಿ ಕಳೆದ ಎರಡು ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಇತ್ತ ತುಮಕೂರು ಡಿಸಿ ಬೆಸ್ಕಾಂ ಮತ್ತು ಕೆಇಬಿ ಇಲಾಖೆಯ ಅಧಿಕಾರಿಗಳಿಗೆ ಮುನ್ನೆಚ್ಚರಿಕಾ ಕ್ರಮವನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ರು. ಆದ್ರೆ ಯಾಕೋ ಬೆಸ್ಕಾಂ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಳ್ಳದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ನಡೆದಿರುವ ಬಾಲಕನ ಸಾವು .
ಮೃತ ಬಾಲಕನನ್ನು 13 ವರ್ಷದ ಅಚುತ್ ಕುಮಾರ್ ಎನ್ನಲಾಗಿದೆ. ಅಚುತ್ ಕುಮಾರ್ ಎಂದಿನಂತೆ ಮನೆಯ ಬಳಿ ಆಟವಾಡುತಿದ್ದ. ಮನೆಯ ಪಕ್ಕದಲ್ಲಿಯೇ ಇದ್ದ ಕಂಬದಿಂದ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಳ್ಳಲಾಗಿತ್ತಂತೆ. ಮಳೆಯಿಂದಾಗಿ ವಿದ್ಯುತ್ ವೈರ್ ಮನೆಯ ಬಳಿ ಇದ್ದ ಅಂಗಡಿಯ ಮೇಲೆ ಬಿದ್ದಿದ್ದೆ. ಬೀಸುತ್ತಿದ್ದ ಗಾಳಿಯಿಂದಾಗಿ ಅಂಗಡಿಯ ಪಿಲ್ಲಗೆ ವೈರ್ ಸ್ಪರ್ಷಿಸಿದೆ. ಆಟವಾಡುತ್ತಿದ್ದ ಬಾಲಕ ನೋಡದೆ ಅಂಗಡಿಯ ಪಿಲ್ಲರ್‌ನ್ನು ಮುಟ್ಟಿದ್ದಾನೆ. ಕೂಡಲೇ ಬಾಲಕನಿಗೆ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ ಎನ್ನಲಾಗಿದೆ. ಇತ್ತ ಮಗನನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಈಗಾಗಲೇ ಮಳೆಯಿಂದಾಗಿ ಜಿಲ್ಲೆಯಲ್ಲಿ ವಿದ್ಯುತ್ ಪ್ರವಹಿಸಿ 3 ಸಾವುಗಳು ಸಂಭವಿಸಿವೆ. ಆದ್ರೆ ಮಾದ್ಯಮಗಳಲ್ಲಿ ಈ ಕುರಿತು ವರದಿ ಬಿತ್ತರವಾದರೂ ಕೂಡ ಬೆಸ್ಕಾಂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಇತ್ತ ಚಿಕ್ಕನಾಯಕನಹಳ್ಳಿ ವಿದ್ಯುತ್ ಪ್ರವಹಿಸಿ 13 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಬೇಕಿದೆ. ಮಳೆ ಹೆಚ್ಚಾಗಿರುವ ಕಾರಣ ಸಾರ್ವಜನಿಕರು ಮನೆಗಳಿಗೆ ಹಾಕಿರುವ ಹಳೆಯ ತಂತಿ ಮತ್ತು ವೈರ್‌ಗಳನ್ನ ಬದಲಾಯಿಸಿಕೊಳ್ಳುವಂತೆ ಅರಿವು ಮೂಡಿಸಬೇಕು. ಇಲ್ಲವೇ ಖುದ್ದು ಅವರೇ ಮುಂದೆ ನಿಂತು ಸರಿಪಡಿಸಬೇಕಾಗಿದೆ.