London : ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಅವರ ಮಾಜಿ ಪತಿ, ಕೈಗಾರಿಕೋದ್ಯಮಿಯಾಗಿದ್ದ ಸಂಜಯ್ ಕಪೂರ್ ಅವರು ಪೋಲೋ ಪಂದ್ಯಾವಳಿ ಆಡುತ್ತಿದ್ದ ವೇಳೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಸಂಜಯ್ ಕಪೂರ್ ಅವರು ಸೋನಾಕಾಮ್ ಸ್ಟಾರ್ ಲಿಮಿಟೆಡ್ ಕಂಪನಿಯ ಅಧ್ಯಕ್ಷರಾಗಿದ್ದರು ಮತ್ತು ಯುನೈಟೆಡ್ ಕಿಂಗ್ಡಮ್ನಲ್ಲಿ ನೆಲೆಸಿದ್ದರು. ಕ್ರೀಡಾ ಪ್ರಿಯರಾಗಿದ್ದ ಅವರು ಪೋಲೋ ಆಡುತ್ತಿದ್ದಾಗ ತೀವ್ರ ಹೃದಯಾಘಾತಕ್ಕೊಳಗಾಗಿ ತಕ್ಷಣವೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಅಸುನೀಗಿದರು.
ನಿಧನಕ್ಕೂ ಕೆಲವೇ ಗಂಟೆಗಳ ಹಿಂದೆ, ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಹಮದಾಬಾದ್-ಲಂಡನ್ ವಿಮಾನ ಅಪಘಾತದ ಬಗ್ಗೆ ಸಂತಾಪ ಸೂಚಿಸಿದ್ದರು. "ಅಹಮದಾಬಾದ್ನ ವಿಮಾನ ಅಪಘಾತ ಕೆಟ್ಟ ಸುದ್ದಿ. ದುರಂತದಿಂದ ತೊಂದರೆಗೆ ಒಳಗಾದ ಎಲ್ಲಾ ಕುಟುಂಬದವರಿಗೆ ನನ್ನ ಸಂತಾಪ. ಈ ಕಷ್ಟದ ಸಮಯದಲ್ಲಿ ಅವರ ಕುಟುಂಬದವರಿಗೆ ಶಕ್ತಿ ಸಿಗಲಿ" ಎಂದು ಅವರು ಟ್ವೀಟ್ ಮಾಡಿದ್ದರು.
ಇದು ಅವರ ಕೊನೆಯ ಪೋಸ್ಟ್ ಆಗಿದ್ದು, ಅವರ ಅಕಾಲಿಕ ನಿಧನಕ್ಕೆ ಸಿನಿಮಾ ಹಾಗೂ ಕೈಗಾರಿಕಾ ಲೋಕದಲ್ಲಿ ದುಃಖದ ಛಾಯೆ ಸೃಷ್ಟಿಯಾಗಿದೆ.