ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ ಹಾಗೂ ಧನ್ಯತಾ ಅವರ ವಿವಾಹ ಮಹೋತ್ಸವ ಅದ್ಧೂರಿಯಾಗಿ ನೆರವೇರಿದೆ. ಹೊಸಜೀವನಕ್ಕೆ ಕಾಲಿಟ್ಟ ನವ ಜೋಡಿಗೆ ಗಣ್ಯರು, ಸಿನಿತಾರೆಯರು, ಆಪ್ತರು, ಅಭಿಮಾನಿಗಳು ಶುಭಹಾರೈಸಿದ್ದಾರೆ. ಮೈಸೂರಿನ ವಸ್ತು ಸಂಗ್ರಹಾಲಯ ಮೈದಾನದಲ್ಲಿ ನಡೆದ ಮದುವೆ ಸಂಭ್ರಮದಲ್ಲಿ ಗುರು ಹಿರಿಯರು, ಸ್ನೇಹಿತರು, ಕುಟುಂಬಸ್ಥರ ಸಮ್ಮುಖದಲ್ಲಿ ಡಾಲಿ ಧನಂಜಯ ಅವರು ಧನ್ಯತಾ ಅವರಿಗೆ ತಾಳಿ ಕಟ್ಟಿ ಅಧಿಕೃತವಾಗಿ ಹೊಸ ಬಾಳಿಗೆ ಸ್ವಾಗತ ಮಾಡಿದ್ದಾರೆ.
ಕನ್ನಡ ಮತ್ತು ಇತರೆ ಭಾಷೆಯ ಚಿತ್ರರಂಗಲ್ಲಿ ಗುರುತಿಸಿಕೊಂಡಿರುವ ಡಾಲಿ ಧನಂಜಯ ಅವರ ಬದುಕಿನಲ್ಲಿ ಈಗ ಹೊಸ ಅಧ್ಯಾಯ ಶುರು ಆಗಿದೆ. ಧನ್ಯತಾ ಜೊತೆ ಡಾಲಿ ಧನಂಜಯ ಅವರು ಹಸೆಮಣೆ ಏರಿದ್ದಾರೆ. ಮದುವೆಯಲ್ಲಿ ಗೋಲ್ಡನ್ ಬಣ್ಣದ ಶೇರ್ವಾನಿಯಲ್ಲಿ ಡಾಲಿ ಮತ್ತು ಗೋಲ್ಡನ್ ಬಣ್ಣದ ಸೀರೆಯಲ್ಲಿ ಧನ್ಯತಾ ಮಿಂಚಿದ್ದಾರೆ.
ಡಾಲಿ ಮದುವೆಗೆ ಆಗಮಿಸಿದ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಡಾಲಿಯನ್ನು ತಬ್ಬಿಕೊಂಡು ಶುಭ ಹಾರೈಸಿದ್ದಾರೆ. ನಟ ಶಿವರಾಜ್ ಕುಮಾರ್, ಸಪ್ತಮಿ ಗೌಡ, ತರುಣ್ ಸುಧೀರ್ ಸೋನಲ್, ವಸಿಷ್ಠ ಸಿಂಹ ಯುವರಾಜ್ ಕುಮಾರ, ದಿವ್ಯ ಉರುಡುಗ, ವಿನಯ್ ರಾಜ್ ಡಾಲಿ ಮದುವೆಗೆ ಬಂದು ವಿಶ್ ಮಾಡಿದ್ದಾರೆ.