ಬೆಂಗಳೂರು: ರೇಣುಕಸ್ವಾಮಿ ಕೊಲೆ ಕೇಸ್ | ಏಪ್ರಿಲ್ 8 ಕ್ಕೆ ವಿಚಾರಣೆ ಮುಂದೂಡಿಕೆ

ಬೆಂಗಳೂರು:

ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 57 ನೇ ಸಿಸಿಎಚ್‌ ಕೋರ್ಟ್‌ ಇಂದು ವಿಚಾರಣೆಯನ್ನು ಏಪ್ರಿಲ್‌ 8 ಕ್ಕೆ ಮುಂದೂಡಿದೆ.

ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಕೇಸ್‌ ಗೆ ಸಂಬಂಧಿಸಿದಂತೆ ಬೆಂಗಳೂರಿನ 57 ನೇ ಸಿಸಿಎಚ್‌ ಕೋರ್ಟ್‌ ನಲ್ಲಿ ಇಂದು ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಇಬ್ಬರು ಆರೋಪಿಗಳನ್ನು ಹೊರತು ಪಡಿಸಿ ಎಲ್ಲಾ ಆರೋಪಿಗಳು ವಿಚಾರಣೆಗೆ ಹಾಜರಿದ್ದರು. ಈಗಾಗಲೇ ನಟ ದರ್ಶನ್‌ ಹಾಗೂ ಪವಿತ್ರಾ ಗೌಡ ಸೇರಿದಂತೆ ಎಲ್ಲಾ ಆರೋಪಿಗಳಿಗೂ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.  

ವಿಚಾರಣೆ ವೇಳೆ ಸಾಕ್ಷಿಗಳ ಮೇಲೆ ಪೊಲೀಸರು ದರ್ಶನ್‌ ವಿರುದ್ದ ಸಾಕ್ಷಿ ಹೇಳುವಂತೆ ಒತ್ತಡ ಹಾಕುತ್ತಿದ್ದಾರೆ ಎಂದು ದರ್ಶನ್‌ ಪರ ವಕೀಲ ಸುನೀಲ್‌ ಅವರು ನ್ಯಾಯಾಧೀಶರ ಮುಂದೆ ವಾದ ಮಂಡಿಸಿದ್ದಾರೆ. ಹಾಗೂ ಈ ವೇಳೆ ನ್ಯಾಯಾಧೀಶರಾದ ಜಯಶಂಕರ್ ಮಧ್ಯ ಪ್ರವೇಶಿಸಿ ಅಪ್ರೂವರ್‌ ಆಗಲು ಕೋರ್ಟ್‌ ಅನುಮತಿ ಪಡೆಯಬೇಕು ಹಾಗೂ ಒತ್ತಡದಿಂದ ಮಾಫಿ ಸಾಕ್ಷಿ‌ ಮಾಡಲಾಗುವುದಿಲ್ಲ ನೀವು ಅರ್ಜಿ ಹಾಕಿದರೆ ಈ ಬಗ್ಗೆ ವಿಚಾರಣೆ ನಡೆಸಬಹುದು ಎಂದು ದರ್ಶನ್‌ ಪರ ವಕೀಲರಿಗೆ ಜಡ್ಜ್‌ ಹೇಳಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಬೆಂಗಳೂರಿನ 57 ನೇ ಸಿಸಿಎಚ್‌ ಕೋರ್ಟ್‌ ಏಪ್ರಿಲ್‌ 8 ಕ್ಕೆ ವಿಚಾರಣೆಯನ್ನು ಮುಂದೂಡಲು ಆದೇಶಿಸಿದೆ.

 

Author:

...
Editor

ManyaSoft Admin

Ads in Post
share
No Reviews