ಬೆಂಗಳೂರು : ಬೆಂಗಳೂರಿನಲ್ಲಿ ಭಾರೀ ಮಳೆಯ ಪರಿಣಾಮವಾಗಿ ನಗರದೆಲ್ಲೆಡೆ ಅನಾಹುತಗಳು ಸಂಭವಿಸುತ್ತಿವೆ. ಮಳೆ ಹಾನಿ ಪ್ರದೇಶಗಳಿಗೆ ಸಿಎಂ ಮತ್ತು ಡಿಸಿಎಂ ಭೇಟಿ ನೀಡಬೇಕಿದ್ದರೂ, ಆದರೆ ಕೊನೆ ಕ್ಷಣದಲ್ಲಿ ಅವರ ಸಿಟಿ ರೌಂಡ್ಸ್ ರದ್ದಾಗಿವೆ. ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಬೆಂಗಳೂರು ತತ್ತರಿಸಿ ಹೋಗಿದ್ದು, ಹಲವೆಡೆ ಜಲಾವೃತ ಸ್ಥಿತಿಯಾಗಿದೆ. ಇತ್ತೀಚಿಗೆ, ಶೆಟ್ಟಿಹಳ್ಳಿ ಪ್ರದೇಶದಲ್ಲಿ ಕಾಂಪೌಂಡ್ ವೊಂದು ಕುಸಿದ ಪರಿಣಾಮ, ಓರ್ವ ಮಹಿಳೆ ದುರ್ಮರಣಕ್ಕೀಡಾದಿದ್ದಾರೆ.
ಈ ಎಲ್ಲಾ ಹಿನ್ನಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದು ಮುಂಜಾನೆ ಮಳೆ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ಸಿದ್ದರಾಗಿದ್ದರು. ಆದರೆ ಮಧ್ಯಾಹ್ನ ಮತ್ತೆ ಮಳೆಯ ಆರಂಭವಾಗಿದ್ದು, ಭದ್ರತಾ ಹಾಗೂ ಸಂಚಾರದ ಅಡಚಣೆಗಳಿಂದಾಗಿ ಸಿಟಿ ರೌಂಡ್ಸ್ ರದ್ದುಗೊಂಡಿದೆ.
ಇನ್ನು ಸಿಟಿ ರೌಂಡ್ಸ್ ರದ್ದಾದರೂ, ಸಿಎಂ ಸಿದ್ದರಾಮಯ್ಯ ಬಿಬಿಎಂಪಿ ಕಂಟ್ರೋಲ್ ರೂಂಗೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಹಾಗೂ ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಭಾಗವಹಿಸಲಿದ್ದಾರೆ.