ಬೆಂಗಳೂರು : ಮದ್ಯ ಪ್ರಿಯರಿಗೆ ನಾಳೆ ಎಣ್ಣೆ ಸಿಗೋದು ಡೌಟು, ಯಾಕಂದೆರೆ ರಾಜ್ಯಾದ್ಯಂತ ಮೇ 21 ರಂದು ಮದ್ಯ ಮಾರಾಟ ಸಂಪೂರ್ಣ ಬಂದ್ ಆಗಲಿದೆ. ಕಳೆದೆರಡು ವರ್ಷದಿಂದ ಮದ್ಯದ ಮೇಲಿನ ಬೆಲೆ ಏರಿಕೆ ಹಾಗೂ ಲೈಸೆನ್ಸ್ ಶುಲ್ಕ ಏರಿಕೆ ವಿರೋಧಿಸಿ ಕರ್ನಾಟಕ ಮದ್ಯ ಮಾರಾಟಗಾರರು ಮೇ.21ಕ್ಕೆ ರಾಜ್ಯಾದ್ಯಂತ ಮದ್ಯ ಮಾರಾಟ ಬಂದ್ ಮಾಡಿ ಪ್ರತಿಭಟನೆ ಮಾಡುತ್ತಿದ್ದಾರೆ.
ಮೇ 15 ರಂದು ಸರ್ಕಾರವು ಪರವಾನಗಿ ಶುಲ್ಕವನ್ನು ದುಪ್ಪಟ್ಟುಗೊಳಿಸುವ ಕರಡು ಅಧಿಸೂಚನೆ ಹೊರಡಿಸಿತ್ತು. ಲೈಸೆನ್ಸ್ ಶುಲ್ಕವನ್ನು ಹೆಚ್ಚಿಸಿರುವುದರಿಂದ ಮಾಲೀಕರಿಗೆ ತೀವ್ರ ನಷ್ಟ ಎದುರಾಗುವುದಲ್ಲದೇ, ಗ್ರಾಹಕರ ಮೇಲೂ ಇದರ ಪರಿಣಾಮ ಬೀಳಲಿದೆ, ಇದ್ರಿಂದ ಬೇಸತ್ತ ವೈನ್ ಶಾಪ್ ಮಾಲೀಕರು ತೀವ್ರ ರೂಪದಲ್ಲಿ ವಿರೋಧ ವ್ಯಕ್ತಪಡಿಸಿ ಕರ್ನಾಟಕ ವೈನ್ ಮರ್ಚೆಂಟ್ ಅಸೋಸಿಯೇಷನ್, ನ್ಯಾಷನಲ್ ರೆಸ್ಟೊರೆಂಟ್ ಅಸೋಸಿಯೇಷನ್ ಹಾಗೂ ಕರ್ನಾಟಕ ಬ್ರೆವರಿ ಅಂಡ್ ಡಿಸ್ಟಿಲ್ಲರಿ ಅಸೋಸಿಯೇಷನ್ ಗಳು ನಾಳೆ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತಿದ್ದಾರೆ.