ಬೆಂಗಳೂರು :
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಿಬಿಐ ಕೋರ್ಟ್ ತೀರ್ಪು ಪ್ರಕಟಿಸಿದ್ದು ಜನಾರ್ಧನ ರೆಡ್ಡಿಗೆ ಮತ್ತೊಮ್ಮೆ ಶಾಕ್ ನೀಡಿದೆ. ಗಂಗಾವತಿಯ ಶಾಸಕ ಜನಾರ್ಧನ ರೆಡ್ಡಿಗೆ ಹೈದರಾಬಾದ್ ನ ನಾಂಪಲ್ಲಿಯ ಸಿಬಿಐ ಕೋರ್ಟ್ ಬರೋಬ್ಬರಿ 16 ವರ್ಷದ ಬಳಿಕ ರೆಡ್ಡಿ ಆರೋಪಿ ಎಂದು ತೀರ್ಪು ನೀಡಿದೆ.
ಸದ್ಯ ಸಿಬಿಐ ಕೋರ್ಟ್ ಜನಾರ್ಧನ ರೆಡ್ಡಿಯನ್ನು ಆರೋಪಿ ಎಂದು ಪ್ರಕಟಿಸುತ್ತಿದ್ದಂತೆ ರೆಡ್ಡಿಗೆ ಬಂಧನದ ಭೀತಿ ಎದುರಾಗಿದೆ. ಒಟ್ಟು 29 ಲಕ್ಷ ಟನ್ ಅಕ್ರಮ ಅಧಿರು ಲೂಟಿ ಮಾಡಿದ ಆರೋಪದಲ್ಲಿ ಅವರಿಗೆ ಅಪರಾಧಿ ಎಂದು ಶಿಕ್ಷೆ ಪ್ರಟಕವಾಗಿದೆ. ಮತ್ತೇ ಅವರು 7 ವರ್ಷ ಜೈಲು ಶಿಕ್ಷೆ ವಿಧಿಸಿ ಸಿಬಿಐ ಆದೇಶ ಹೊರಡಿಸಿದೆ.
ಇದೇ ಒಎಂಸಿ ಕೇಸ್ ನಲ್ಲಿ ಈ ಹಿಂದೆ ಕೂಡ ಗಾಲಿ ಜನಾರ್ಧನ ರೆಡ್ಡಿ ಬರೋಬ್ಬರಿ ಮೂರುವರೆ ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದರು. ಇದೀಗ ಓಬಲಾಂಪುರ ಮೈನಿಂಗ್ ಕೇಸ್‌ನಲ್ಲಿ ಅವರ ಆರೋಪ ಸಾಬೀತಾಗಿದೆ. ರೆಡ್ಡಿಯನ್ನು ಎ2 ಆರೋಪಿ ಎಂದು ಕೋರ್ಟ್ ತೀರ್ಪು ನೀಡಿದೆ. ರಾಜ್ಯದ 29 ಲಕ್ಷ ಟನ್ ಆಧಿರನ್ನು ಅಕ್ರಮವಾಗಿ ಆಂಧ್ರಕ್ಕೆ ಸಾಗಾಣಿಕೆ ಮಾಡಿದ್ದರು. ಇದರಲ್ಲಿ 884 ಕೋಟಿ ಆದಾಯ ಗಳಿಸಿರುವುದು ಸಾಬೀತಾಗಿದೆ. ಈ ಕಾರಣಕ್ಕೆ ಸಿಬಿಐ ಕೋರ್ಟ್ ಜನಾರ್ಧನ ರೆಡ್ಡಿಯನ್ನ ದೋಷಿ ಎಂದು ತೀರ್ಪು ನೀಡಿ ಶಿಕ್ಷೆ ಪ್ರಕಟಿಸಿದೆ.