ಬೆಳಗಾವಿ : ಪ್ರೇಯಸಿ ಕತ್ತು ಕೊಯ್ದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ..!

ಮೃತ ಪ್ರಶಾಂತ್‌ ಯಲ್ಲಪ್ಪ ಕುಂಡೇಕರ್‌ (29) ಮತ್ತು ಐಶ್ವರ್ಯ ಮಹೇಶ್‌ ಲೋಹಾರ್ (18)
ಮೃತ ಪ್ರಶಾಂತ್‌ ಯಲ್ಲಪ್ಪ ಕುಂಡೇಕರ್‌ (29) ಮತ್ತು ಐಶ್ವರ್ಯ ಮಹೇಶ್‌ ಲೋಹಾರ್ (18)
ಬೆಳಗಾವಿ

ಬೆಳಗಾವಿ:

ಪ್ರೇಯಸಿಯ ಕತ್ತು ಕೊಯ್ದು ಹತ್ಯೆ ಮಾಡಿ ನಂತರ ಪ್ರಿಯಕರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿಯ ಶಹಾಪುರದ ನವಿಗಲ್ಲಿಯಲ್ಲಿ ನಡೆದಿದೆ.

ಹುಡುಗಿ ಮನೆಯವರು ಮದುವೆ ನಿರಾಕರಿಸಿದ್ದಕ್ಕೆ ಚಾಕುವಿನಿಂದ ಯುವತಿಯ ಕತ್ತು ಸೀಳಿ ಕೊಲೆಗೈದು ನಂತರ ಅದೇ ಚಾಕುವಿನಿಂದ ಪ್ರಿಯಕರನು ಕತ್ತು ಕುಯ್ದುಕೊಂಡು ಆತ್ಮಹತ್ಯೆಗ ಶರಣಾಗಿದ್ದಾನೆ.  ಐಶ್ವರ್ಯ ಮಹೇಶ್‌ (18) ಮತ್ತು ಪ್ರಶಾಂತ್‌ ಯಲ್ಲಪ್ಪ ಕುಂಡೇಕರ್‌ (29) ಮೃತ ದುರ್ದೈವಿಯಾಗಿದ್ದಾರೆ. ಮಂಗಳವಾರ ಸಂಜೆ ಯುವಕ ಯುವತಿಯನ್ನು ತನ್ನ ಚಿಕ್ಕಮ್ಮನ ಮನೆಗೆ ಕರೆದುಕೊಂಡು ಹೋಗಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮೊದಲು ವಿಷ ಸೇವಿಸಿ ನಂತರ ಯುವತಿಯ ಕತ್ತು ಕೊಯ್ದು ಬಳಿಕ ತಾನೂ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಬಗ್ಗೆ ಬೆಳಗಾವಿಯ ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನು ಬಿಮ್ಸ್‌ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇನ್ನು ಸಾವಿನ ಸುದ್ದಿ ತಿಳಿದು ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ.

Author:

share
No Reviews