ಹಣೆಬರಹ ಕೆಟ್ಟೋ ಏನೋ ಕೆಲವು ಜನ ಮಾನಸಿಕವಾಗಿ ಕುಗ್ಗಿ ಮನೆ ತೋರೆದು ದೇವಾಲಯಗಳ ಮುಂದೆ...ನಗರ ಪ್ರದೇಶಗಳಲ್ಲಿ ಭಿಕ್ಷಾಟನೆ ಮಾಡಿಕೊಂಡು ಅವರಿವರು ಕೊಟ್ಟಂತಹ ಹಣ, ಊಟದಿಂದ ಹೊಟ್ಟೆ ತುಂಬಿಸಿಕೊಂಡ ಸಿಕ್ಕ ಸಿಕ್ಕ ಜಾಗದಲ್ಲಿ ಮಲಗಿ ಜೀವನ ಸಾಗಿಸುತ್ತಾರೆ... ಅದ್ರೆ ಅಂತಹಾ ಭಿಕ್ಷುಕನೊರ್ವ ಚಿಕ್ಕಬಳ್ಳಾಪುರ ಹೊರಹೊಲಯದ ಕೊತ್ತನೂರು ಗೇಟ್ ಬಳಿ ಎರಡು ಮೂರು ವರ್ಷಗಳಿಂದ ಮಾನಸಿಕ ಆಶ್ವಸ್ಥನೊರ್ವ ಓಡಾಡಿಕೊಂಡು ಭಿಕ್ಷಾಟನೆ ಮಾಡಿಕೊಂಡು ಅವರಿವರು ಕೊಟ್ಟಂತಹ ಕಾಸು,ಊಟವನ್ನು ಸವೆದುಕೊಂಡು ರಸ್ತೆ ಬದಿ ಮಲಗುತ್ತಿದ್ದ ಅದ್ರೆ ಅವನು ಯಾವ ಊರು, ಹೆಸರು ಏನು.. ಎಂಬುದು ಯಾರಿಗೂ ತಿಳಿದಿಲ್ಲ..
ಎಂದಿನಂತೆ ಗುರುವಾರ ರಾತ್ರಿ ಊಟಕ್ಕಾಗಿ ಹೋಟೆಲ್ ಬಳಿ ನಿಂತಾಗ.. ಇವರ ಸ್ಥಿತಿ ನೋಡಿ ಊಟ ಕೊಡಿಸಿದ್ದಾರೆ.. ಅದೇ ಊಟವನ್ನು ತೆಗೆದುಕೊಂಡು ಕೊತ್ತನೂರು ಗೇಟ್ ಬಳಿ ಇರುವ ರಸ್ತೆಯನ್ನು ದಾಟಲು ಮುಂದಾಗಿದ್ದಾನೆ ಅದ್ರೆ ಬೆಂಗಳೂರಿನ ಕಡೆಯಿಂದ ಬಂದ ಕಾರು ಯಮನಂತೆ ಬಂದು ಗುದ್ದಿದೆ ಇದ್ರಿಂದ ಭಿಕ್ಷುಕನಿಗೆ ತಲೆಗೆ, ಕಾಲಿಗೆ ಗಂಭೀರ ಪೆಟ್ಟಾಗಿದ್ದು ಚಿಂತಾಜನಕವಾಗಿದೆ.. ಅದ್ರೆ ಮಾನವೀಯತೆ ಮರೆಯದ ಕಾರು ಚಾಲಕರು ಗುದ್ದಿ ಪರಾರಿಯಾಗಿದ್ದಾರೆ..
ಇನ್ನೂ ಈ ಅಪಘಾತವಾಗುತ್ತಿದ್ದಂತೆ ಕಾರು ಚಾಲಕ ವಾಹನ ನಿಲ್ಲಿಸದೆ ಅತೀ ವೇಗವಾಗಿ ಅಲ್ಲಿಂದ ಕಾಲ್ಕಿತ್ತಿದ್ದಾನೆ... ಇದನ್ನು ಗಮನಿಸಿದ ಸ್ಥಳೀಯರು ಸ್ಥಳಕ್ಕೆ ಬಂದು ನೋಡಿದಾಗ ಭೀಕ್ಷುಕ ಗಂಭೀರ ಗಾಯಗಳಿಂದ ಬಿದ್ದಿದ್ದು ಕಂಡು ಪೋಲಿಸ್ರರಿಗೆ ಮಾಹಿತಿ ನೀಡಿ ಆಂಬುಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ ಅದ್ರೆ ಅಪಘಾತದಲ್ಲಿ ಭೀಕ್ಷುಕನಿಗೆ ತಲೆಗೆ ಪೆಟ್ಟಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಂತೆ ಸಾವನ್ನಪ್ಪಿದ್ದಾನೆ.
ಇನ್ನೂ ಮೃತ ಭಿಕ್ಷುಕ ಯಾರು ಎಂಬುದು ತಿಳಿದು ಬಂದಿಲ್ಲ.. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು.. ಸಂಚಾರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗೆ ಬಲೆ ಬಿಸಿದ್ದಾರೆ...