ರಾಜ್ಯ: ಬಿಯರ್ ಪ್ರಿಯರಿಗೆ ಮತ್ತೆ ಶಾಕ್

ರಾಜ್ಯ: 

ಡೀಸೆಲ್, ಹಾಲು, ಹಾಗೂ ವಿದ್ಯುತ್ ದರ ಏರಿಕೆಯ ನಡುವೆಯೇ, ರಾಜ್ಯ ಸರ್ಕಾರವು ಮದ್ಯದ ದರ ಹೆಚ್ಚಿಸಲು ತೀರ್ಮಾನಿಸಿದೆ. ಹೊಸ ಕರಡು ಅಧಿಸೂಚನೆ ಹೊರಡಿಸಿರುವ ಸರ್ಕಾರ, ಬಿಯರ್‌ ಮೇಲಿನ ಅಬಕಾರಿ ಸುಂಕವನ್ನು 195% ರಿಂದ 205% ಗೆ ಏರಿಸಲು ನಿರ್ಧರಿಸಿದೆ. ಅಧಿಸೂಚನೆ ಪ್ರಕಟಿಸಿದೆ. ಇದಕ್ಕೆ ವಾರದೊಳಗೆ ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. 

ಬಿಯರ್ ಬೆಲೆ 10 ರಿಂದ 20 ರೂ.ವರೆಗೆ ಏರಿಕೆಯಾಗಲಿದೆ.  ವಿಶೇಷವಾಗಿ, ಆಲ್ಕೋಹಾಲ್ ಪ್ರಮಾಣ ಹೆಚ್ಚಿರುವ ಬ್ರ್ಯಾಂಡ್ಗಳ ಬೆಲೆ ಗಣನೀಯವಾಗಿ ಏರಲಿವೆ. ಈ ಎಲ್ಲಾ ಪ್ರಕಾರದ ಮದ್ಯದ ದರ ಪ್ರತಿ ಕ್ವಾಟರ್‌ಗೆ 10 ರಿಂದ 15 ರೂ.ವರೆಗೆ ಹೆಚ್ಚಳವಾಗಲಿದೆ. ಹೈ ಎಂಡ್ ಅಥವಾ ಪ್ರೀಮಿಯಂ ಮದ್ಯಗಳ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ರಾಜ್ಯ ಸರ್ಕಾರದಿಂದ ಎರಡು ವರ್ಷಗಳಲ್ಲಿ ಮೂರನೇ ಬಾರಿಗೆ ಮದ್ಯದ ದರ ಏರಿಕೆಗೆ ತೀರ್ಮಾನಿಸಲಾಗಿದೆ.‌

Author:

...
Keerthana J

Copy Editor

prajashakthi tv

share
No Reviews