ತುಮಕೂರು : ಕುಡಿದ ಮತ್ತಲ್ಲಿ ಕಾರು ಚಾಲನೆಯಿಂದ ಭೀಕರ ಅಪಘಾತ | ವೃದ್ದೆ ಪ್ರಾಣಾಪಾಯದಿಂದ ಪಾರು

ತುಮಕೂರು :

ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿದ್ದ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ, ವಿದ್ಯುತ್‌ ಕಂಬ ಮುರಿದು ಬಿದ್ದಿದ್ದು, ರಸ್ತೆಯಲ್ಲಿ ಹೋಗ್ತಿದ್ದ ವೃದ್ದೆ ಗ್ರೇಟ್ ಎಸ್ಕೇಪ್‌ ಆಗಿದ್ದಾರೆ. ಈ ಘಟನೆ ತುಮಕೂರು ನಗರದ ಬೆಳಗುಂಬ ರಸ್ತೆಯ ಜ್ಯೋತಿಪುರದಲ್ಲಿ ನಡೆದಿದೆ. ತುಮಕೂರು ಕಡೆಯಿಂದ ದೇವರಾಯದುರ್ಗ ಕಡೆಗೆ ಹೋಗ್ತಿದ್ದ ಮಾರುತಿ ಸುಜುಕಿ ಕಾರು ಜ್ಯೋತಿಪುರದ ಬಳಿ ಅಪಘಾತ ಸಂಭವಿಸಿದೆ.

ಕುಡಿದ ಮತ್ತಲ್ಲಿ ಡ್ರೈವರ್‌ ಕಾರು ಚಲಾವಣೆ ಮಾಡಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ಸಾಬೀತಾಗಿದೆ. ಇದಕ್ಕೆ ಪೂರಕವಾಗುವಂತೆ ಕಾರಿನಲ್ಲಿ ಮದ್ಯದ ಬಾಟಲ್‌ ಪತ್ತೆಯಾಗಿದೆ. ವೇಗವಾಗಿ ಬರ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡು ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಿದ್ಯುತ್‌ ಕಂಬ ಉರುಳಿ ಬಿದ್ದಿದೆ. ರಸ್ತೆ ದಾಟುತ್ತಿದ್ದ ವೃದ್ದೆ ಪವಾಡ ಸದೃಶ್ಯ ರೀತಿ ಪಾರಾಗಿದ್ದಾರೆ. ಇತ್ತ ಅಪಘಾತ ಮಾಡಿದ ಕಾರು ಚಾಲಕ ಕಾರನ್ನು ಬಿಟ್ಟು ಸ್ಥಳದಿಂದ ಎಸ್ಕೇಪ್‌ ಆಗಿದ್ದಾನೆ. ಇನ್ನು ವಿದ್ಯುತ್‌ ಕಂಬ ಉರುಳಿದ್ದರಿಂದ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಿತ್ತು.

ಕಾರು ಚಾಲಕನು ಕುಡಿದ ಮತ್ತಿನಲ್ಲಿ ವೇಗವಾಗಿ ಬಂದು ಅಪಘಾತ ಮಾಡಿ ಕೆಇಬಿ ಇಲಾಖೆಗೆ ಅದೆಷ್ಟು ಖರ್ಚಾಗುತ್ತೋ ಅಷ್ಟು ನಾನು ಕಟ್ಟಿ ಕೊಡುತ್ತೇನೆ ಎಂದು ಹೇಳಿ ಎಸ್ಕೇಪ್‌ ಆಗಿದ್ದಾನೆ. ಇತ್ತೀಚಿನ ದಿನಗಳಲ್ಲಿ ಹನುಮಂತಪುರ - ಬೆಳಗುಂಬ ರಸ್ತೆಯಲ್ಲಿ ಅನೇಕ ಮದ್ಯದ ಅಂಗಡಿಗಳು ತೆರೆಯಲಾಗಿದ್ದು, ಕುಡಿದು ಗಾಡಿ ಓಡಿಸಿ ಹೀಗೆ ಅಪಘಾತ ಮಾಡ್ತಾರೆ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಅಪಘಾತದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಾರಿಯಾದ ಚಾಲಕನ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.

 

Author:

...
Sushmitha N

Copy Editor

prajashakthi tv

share
No Reviews