ಮದುವೆ ಸೇರಿದಂತೆ ಇನ್ನಿತ್ತರ ಸಮಾರಂಭಗಳಲ್ಲಿ ಮೇಕಪ್ ಬಳಸುವುದು ಹೆಚ್ಚು, ಆದರೆ ಮೇಕಪ್ ಬಳಸುವ ಮುನ್ನ ಅದನ್ನು ತೆಗೆಯುವ ಬಗ್ಗೆಯೂ ಗೊತ್ತಿರಲೇಬೇಕು. ದೀರ್ಘ ಸಮಯ ಮುಖದ ಮೇಲೆ ಮೇಕಪನ್ನು ಬಿಡುವುದು ಚರ್ಮದ ಆರೋಗ್ಯಕ್ಕೆ ಒಳ್ಳೆಯದಲ್ಲ. ಸರಿಯಾದ ರೀತಿಯಲ್ಲಿ ಮೇಕಪ್ ರಿಮೂವ್ ಮಾಡಲು ಈ ಕೆಲವು ಸಲಹೆಗಳನ್ನು ಅನುಸರಿಸಿ.
ಕ್ಲಿನ್ಸಿಂಗ್ ಎಣ್ಣೆ: ಶುದ್ದೀಕರಿಸುವ ಎಣ್ಣೆ ಅಥವಾ ಕ್ಲಿನ್ಸಿಂಗ್ ಎಣ್ಣೆಯಿಂದ ಮುಖದ ಮೇಲಿನ ಮೇಕಪ್ ಸ್ವಚ್ಛಗೊಳಿಸಬಹುದು. ಕ್ಲಿನ್ಸಿಂಗ್ ಎಣ್ಣೆಯು ಮೊಂಡುತನದ ಮೇಕಪ್ ತೆಗೆದು ಹಾಕುವುದಲ್ಲದೆ, ರಾಸಾಯನಿಕ ವಸ್ತುಗಳಿಂದ ಕೂಡಿರುವ ಕಲ್ಮಶಗಳನ್ನು ತೆಗೆದುಹಾಕುವಲ್ಲಿ ಸಹಾಯ ಮಾಡುತ್ತದೆ. ಇದರಿಂದ ಚರ್ಮಕ್ಕೆ ಯಾವುದೇ ಹಾನಿಯಾಗುವುದಿಲ್ಲ.
ಮೇಕಪ್ ರಿಮೂವರ್ : ಮಾರುಕಟ್ಟೆಯಲ್ಲಿ ಸಿಗುವ ಈ ದ್ರವ ರೂಪದ ಮೇಕಪ್ ರಿಮೂವರ್ ತೇವಾಂಶವಿರುವ ಕಾರಣ ಸುಲಭವಾಗಿ ಮೇಕಪ್ ತೆಗೆಯಬಹುದು. ಇದು ಚರ್ಮವನ್ನು ತೇವಾಂಶದಿಂದ ಕೂಡಿರುವಂತೆ ಮಾಡಿ ಯಾವುದೇ ಜಿಡ್ಡುಗಳಿಲ್ಲದಂತೆ ಮುಖವನ್ನು ಸ್ವಚ್ಛಗೊಳಿಸುತ್ತದೆ.
ಮೇಕಪ್ ರಿಮೂವರ್ ವೈಪ್ಸ್ : ಮೇಕಪ್ ತೆಗೆಯಲು ಮಾರುಕಟ್ಟೆಯಲ್ಲಿ ಸಿಗುವ ವೈಪರ್ ಬಳಸಬಹುದು. ಈ ಮೇಕಪ್ ರಿಮೂವಿಂಗ್ ವೈಪರ್ ಚರ್ಮದ ಮೇಲಿರುವ ಕೊಳೆಯನ್ನು ತೆಗೆದು ಹಾಕಿ, ಚರ್ಮದ ಆರೋಗ್ಯವನ್ನು ಉತ್ತಮವಾಗಿರಿಸಲು ಸಹಾಯ ಮಾಡುತ್ತದೆ.
ಬಾದಾಮಿ ಎಣ್ಣೆ : ಮೇಕಪ್ ತೆಗೆಯಲು ಅಡುಗೆ ಮನೆಯಲ್ಲಿರುವ ಈ ವಸ್ತುಗಳು ಕೂಡ ಉಪಯೋಗಕ್ಕೆ ಬರುತ್ತದೆ. ಹೀಗಾಗಿ ಮನೆಯಲ್ಲಿ ನೆಲ್ಲಿಕಾಯಿ ಎಣ್ಣೆ ಹಾಗೂ ಬಾದಾಮಿ ಎಣ್ಣೆಯಿದ್ದರೆ ಆದರಿಂದ ಮೇಕಪ್ ತೆಗೆಯಬಹುದು. ಹತ್ತಿಯುಂಡೆಯನ್ನು ಎಣ್ಣೆಗೆ ಅದ್ದಿ ಮುಖಕ್ಕೆ ಉಜ್ಜಿಕೊಳ್ಳುವ ಮೂಲಕ ಮೇಕಪ್ ರಿಮೂವ್ ಮಾಡಬಹುದು.
ಕೊಬ್ಬರಿ ಎಣ್ಣೆ : ಶುದ್ಧ ಕೊಬ್ಬರಿ ಎಣ್ಣೆ ತ್ವಚೆಯು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಮೇಕಪ್ ಹಚ್ಚಿದ್ದರೆ ತೆಗೆಯಲು ತೆಂಗಿನ ಎಣ್ಣೆ ಬಳಸಬಹುದು. ಇದು ತ್ವಚೆಯ ಮೇಲಿನ ರಾಸಾಯನಿಕ ಹಾಗೂ ಅಂಟಿನಂತಹ ಉತ್ಪನ್ನಗಳು ತೆಗೆದು ಹಾಕಿ ಚರ್ಮದ ಆರೋಗ್ಯ ಕಾಪಾಡುತ್ತದೆ.