Beauty Tips :
ನಿಂಬೆಹಣ್ಣು ಆರೋಗ್ಯಕ್ಕೂ ಮತ್ತು ತ್ವಚೆಗೂ ಎರಡಕ್ಕೂ ಉಪಯೋಗಕಾರಿಯಾಗಿದೆ. ಚರ್ಮದ ಅಂದವನ್ನು ಕಾಪಾಡಲು ಸಹ ನಿಂಬೆಹಣ್ಣನ್ನು ಬಳಸಲಾಗುತ್ತೇ , ಅದರೆ ನಿಂಬೆಹಣ್ಣು ತೀಕ್ಷ್ಣವಾದ ಗುಣ ಹೊಂದಿರೋ ಕಾರಣ ನಿಂಬೆಹಣ್ಣನ್ನು ಮುಖಕ್ಕೆ ಉಪಯೋಗಿಸುವ ಮುನ್ನ ಚರ್ಮ ಪರೀಕ್ಷೆ ಮಾಡುವುದು ಉತ್ತಮ , ಯಾಕಂದರೆ ಕೆಲವೊಬ್ಬರ ಚರ್ಮಕ್ಕೆ ನಿಂಬೆರಸ ಸರಿಹೊಂದದಿರುವ ಸಾಧ್ಯತೆ ಇದೆ. ನಿಂಬೆಹಣ್ಣನ್ನು ಈ ರೀತಿಯಾಗಿ ಬಳಸಿ.
ಚರ್ಮದ ಹೊಳಪಿಗಾಗಿ 1 ಟೀ ಚಮಚ ನಿಂಬೆರಸ ಮತ್ತು 1 ಟೀ ಚಮಚ ತುಪ್ಪ ಅಥವಾ ತೆಂಗಿನೆಣ್ಣೆ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. 10 ನಿಮಿಷದ ನಂತರ ತಣ್ಣನೆಯ ನೀರಿನಿಂದ ತೊಳೆಯಿರಿ. ಮೊಡವೆ ಮತ್ತು ಕಲೆಗಳ ನಿವಾರಣೆಗಾಗಿ ನಿಂಬೆರಸ ಮತ್ತು ಜೇನು ತುಪ್ಪ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ. ವಾರದಲ್ಲಿ 2 ಬಾರಿ ಬಳಸಿದರೆ ಚರ್ಮ ಶುದ್ಧವಾಗುತ್ತದೆ.
ಮೊಣಕಾಲು ಮತ್ತು ಕೈಗಳ ಕಪ್ಪುಕಲೆಗಳ ನಿವಾರಣೆಗೆ ನಿಂಬೆರಸ ಮತ್ತು ಬೆಲ್ಲದ ಪುಡಿ ಅಥವಾ ಕಡ್ಲೆ ಹಿಟ್ಟನ್ನು ಮಿಶ್ರಣ ಮಾಡಿ ಚರ್ಮದ ಮೇಲೆ ಹಚ್ಚಿ. 5-10 ನಿಮಿಷ ಮಸಾಜ್ ಮಾಡಿ, ನಂತರ ತೊಳೆಯಿರಿ. ಚರ್ಮದ ತೆಳುವಾದ ಸತ್ತ ಕೋಶಗಳನ್ನು ತೆಗೆದುಹಾಕಲು ನಿಂಬೆರಸ ಮತ್ತು ಸಕ್ಕರೆ ಮಿಶ್ರಣ ಮಾಡಿ ಸ್ಕ್ರಬ್ ಆಗಿ ಬಳಸಿರಿ. ಇದು ಡೆಡ್ ಸ್ಕಿನ್ ತೆಗೆಯುತ್ತದೆ ಹಾಗೂ ಚರ್ಮ ಹೊಳೆಯುತ್ತದೆ.
ನಿಂಬೆರಸ ಮತ್ತು ಮುಲ್ತಾನ ಮಿಟ್ಟಿ ಪುಡಿಯನ್ನು ಮಿಶ್ರಣ ಮಾಡಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ. ಇದು ಮುಖದಲ್ಲಿರುವ ಎಣ್ಣೆಯನ್ನ ಕಮ್ಮಿ ಮಾಡುತ್ತದೆ ಮತ್ತು ಮೊಡವೆಗಳು ದೂರವಾಗುತ್ತವೆ.