BEAUTY TIPS: ಫೇಸ್‌ ಪ್ಯಾಕ್‌ ಬಳಸುವ ಸರಿಯಾದ ವಿಧಾನವನ್ನು ಅನುಸರಿಸುವ ರೀತಿ

ಸಾಂಧರ್ಭಿಕ ಚಿತ್ರ
ಸಾಂಧರ್ಭಿಕ ಚಿತ್ರ
ಆರೋಗ್ಯ-ಜೀವನ ಶೈಲಿ

Beauty Tips: ಮುಖದ ಅಂದವನ್ನು ಹೆಚ್ಚಿಸಿಕೊಳ್ಳಲು ಮಹಿಳೆಯರು ಮಾರುಕಟ್ಟೆಗಳಲ್ಲಿ ಸಿಗುವಂತಹ ಪೇಸ್‌ ಪ್ಯಾಕ್‌ ಗಳ ಮೋರೆ ಹೋಗುತ್ತಿರುವುದು ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿದೆ.ಆದರೆ ಮನೆಯಲ್ಲೇ ಸಿಗುವಂತಹ ಪದಾರ್ಥಗಳಿಂದ ನ್ಯಾಚುರಲ್‌ ಫೇಸ್‌ ಪ್ಯಾಕ್‌ ರೆಡಿ ಮಾಡಬಹುದು. ಒಂದು ವೇಳೆ ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಫೇಸ್ ಪ್ಯಾಕ್​ಗಳನ್ನು ಬಳಸುವಾಗ ನಿಮ್ಮ ಚರ್ಮಕ್ಕೆ ಸರಿಹೊಂದುತ್ತದೆಯೇ ಎಂದು ಪರೀಕ್ಷಿಸಿಕೊಳ್ಳವುದು ಅವಶ್ಯಕವಾಗಿದೆ.

ಫೇಸ್​ಪ್ಯಾಕ್ ಮಾಡಿಕೊಳ್ಳುವ ಮೊದಲು ನಿಮ್ಮ ಸ್ಕಿನ್ ಯಾವ ರೀತಿಯದ್ದು ಎಂದು ತಿಳಿದುಕೊಳ್ಳಬೇಕಾದುದು ಅಗತ್ಯ.ನಿಮ್ಮದು ಎಣ್ಣೆ ಚರ್ಮನಾ ಅಥವಾ ನಾರ್ಮಲ್‌ ಚರ್ಮನಾ ಎಂದು ತಿಳಿದುಕೊಂಡರೆ. ಅದರ ಆಧಾರದ ಮೇಲೆ ಯಾವ ರೀತಿಯ ಫೇಸ್​ಪ್ಯಾಕ್ ಮಾಡಿಕೊಳ್ಳಬೇಕೆಂದು ನಿರ್ಧರಿಸಿ.ಚರ್ಮಕ್ಕೆ ಸರಿಹೊಂದುವ ಫೇಸ್​ಪ್ಯಾಕ್ ಅನ್ನು ಮನೆಯಲ್ಲೇ ಲಭ್ಯವಿರುವ ಹಣ್ಣುಗಳು, ಅಡುಗೆ ಪದಾರ್ಥಗಳು, ಮೊಸರು, ಜೇನುತುಪ್ಪ, ತರಕಾರಿಗಳನ್ನು ಕೂಡ ಬಳಸಿಕೊಂಡು ನ್ಯಾಚುರಲ್ ಫೇಸ್​ಪ್ಯಾಕ್ ತಯಾರಿಸಿಕೊಳ್ಳಬಹುದು. ಇದು ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಫೇಸ್ ಮಾಸ್ಕ್ ಯಾವುದೇ ಇರಲಿ, ಅದನ್ನು ಯಾವ ರೀತಿ ಸರಿಯಾಗಿ ಹಚ್ಚಿಕೊಳ್ಳಬೇಕು ಎಂಬ ಬಗ್ಗೆಯೂ ನಿಮಗೆ ತಿಳಿದಿರಬೇಕು.

ಫೇಸ್​ಪ್ಯಾಕ್ ಹಾಕುವ ಮುಂಚೆ ಮುಖವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಸೌಮ್ಯವಾದ ಕ್ಲೆನ್ಸರ್ ಅನ್ನು ಬಳಸಿ. ಮೃದುವಾದ ಬ್ರಷ್ ಬಳಸಿಕೊಂಡು ಮುಖ ಮತ್ತು ಕುತ್ತಿಗೆಯ ಸುತ್ತ ಫೇಸ್​ಪ್ಯಾಕ್​ನ ಮಿಶ್ರಣವನ್ನು ತೆಳುವಾಗಿ ಹಚ್ಚಿ. ಈ ಮಿಶ್ರಣವನ್ನು ನಿಮ್ಮ ಕಣ್ಣುಗಳು ಮತ್ತು ತುಟಿಗಳಿಗೆ ಹಚ್ಚಿಕೊಳ್ಳಬೇಡಿ.ನೀವು ಬಳಸುವುದು ಎಕ್ಸ್‌ಫೋಲಿಯೇಟಿಂಗ್ ಫೇಸ್ ಮಾಸ್ಕ್ ಆಗಿದ್ದರೆ, ಕೆಲವು ನಿಮಿಷಗಳ ಕಾಲ ವೃತ್ತಾಕಾರವಾಗಿ ಬೆರಳುಗಳಿಂದ ಚರ್ಮವನ್ನು ಮೃದುವಾಗಿ ಮಸಾಜ್ ಮಾಡಬೇಕು.

ಫೇಸ್​ಪ್ಯಾಕ್ ಒಣಗುವವರೆಗೆ 15-20 ನಿಮಿಷಗಳ ಕಾಲ ಇರಬೇಕು. ಸಾಮಾನ್ಯವಾಗಿ, ಎಣ್ಣೆಯುಕ್ತ ತ್ವಚೆಯಲ್ಲಿ ಫೇಸ್​ಪ್ಯಾಕ್ ಬಹಳ ಬೇಗ ಒಣಗುತ್ತದೆ. ಆದರೆ ವಯಸ್ಸಾದ ವಿರೋಧಿ ಮತ್ತು ಹೈಡ್ರೇಟಿಂಗ್ ಮಾಸ್ಕ್​ಗಳನ್ನು ಹೆಚ್ಚು ಸಮಯ ಬಿಡಬೇಕಾಗುತ್ತದೆ. ಫೇಸ್​ಪ್ಯಾಕ್ ಅನ್ನು ತೊಳೆಯಲು ಉಗುರು ಬೆಚ್ಚಗಿನ ನೀರನ್ನು ಬಳಸಿ. ಸುಲಭವಾಗಿ ಸ್ವಚ್ಛಗೊಳಿಸಲು ನೀವು ಮೃದುವಾದ ಕಾಟನ್ ಬಟ್ಟೆಯನ್ನು ಸಹ ಬಳಸಬಹುದು. ಅಥವಾ ಅಂಗಡಿಗಳಲ್ಲಿ ಲಭ್ಯವಿರುವ ಫೇಸ್​ಪ್ಯಾಕ್ ಬ್ರಶ್​ನಿಂದಲೂ ಮಸಾಜ್ ಮಾಡುತ್ತಾ ಮುಖವನ್ನು ಕ್ಲೀನ್ ಮಾಡಿಕೊಳ್ಳಬಹುದು. ಫೇಸ್​ಪ್ಯಾಕ್ ತೊಳೆದುಕೊಂಡ ಅರ್ಧ ಘಂಟೆಯ ನಂತರ ಟೋನಿಂಗ್, ಸೀರಮ್ ಅನ್ನು ಹಚ್ಚಿಕೊಳ್ಳಬಹುದು. ಮಾಯಿಶ್ಚರೈಸಿಂಗ್ ಮತ್ತು ಸನ್‌ಸ್ಕ್ರೀನ್ ಲೋಷನ್ ಹಚ್ಚಿಕೊಳ್ಳಬೇಕು.

Author:

...
Editor

ManyaSoft Admin

Ads in Post
share
No Reviews