BEAUTY TIPS - ಮಜ್ಜಿಗೆಯನ್ನು ಮುಖಕ್ಕೆ ಲೇಪಿಸಿದರೆ ಏನಾಗುತ್ತೆ ಗೊತ್ತಾ..?

ಮಜ್ಜಿಗೆಯ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ಬೇಸಿಗೆಯಲ್ಲಿ ಮಜ್ಜಿಗೆಯನ್ನು ಕುಡಿಯುವುದರಿಂದ ನಮ್ಮ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಮಜ್ಜಿಗೆ ಬರೀ ದೇಹದ ಆರೋಗ್ಯಕ್ಕೆ ಮಾತ್ರವಲ್ಲ ನಮ್ಮ ಚರ್ಮದ ಆರೋಗ್ಯಕ್ಕೂ ಒಳ್ಳೆಯದು. ನಮ್ಮ ಸೌಂದರ್ಯ ವರ್ಧಿಸುವಲ್ಲಿ ಮಜ್ಜಿಗೆಯ ಪಾತ್ರ ಬಹಳಷ್ಟಿದೆ. ಮಜ್ಜಿಗೆಯು ಚರ್ಮವನ್ನು ಶುದ್ಧೀಕರಿಸಲು ಮತ್ತು ಪೋಷಿಸಲು ಸಹಾಯ ಮಾಡುತ್ತದೆ.

​* ಮಜ್ಜಿಗೆ, ಆಲಿವ್ ಎಣ್ಣೆ ಮತ್ತು ಸ್ವಲ್ಪ ಬಾದಾಮಿ ಎಣ್ಣೆಯನ್ನು ಮಜ್ಜಿಗೆಗೆ ಮಿಕ್ಸ್‌ ಮಾಡಿ. ಈ ಮಿಶ್ರಣಕ್ಕೆ ಕೆಲವು ಹನಿ ರೋಸ್ ವಾಟರ್ ಸೇರಿಸಿ. ಇದನ್ನು ಹತ್ತಿ ಉಂಡೆ ಯಲ್ಲಿ ನಿಮ್ಮ ಮುಖದ ಮೇಲೆ ಸಮವಾಗಿ ಹಚ್ಚಿರಿ. 10-15 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ̤ ಮಜ್ಜಿಗೆಯನ್ನು ಚರ್ಮದಲ್ಲಿರುವ ಕಲ್ಮಶಗಳನ್ನು ತೆಗೆಯಲು ಮತ್ತು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಮತ್ತು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ನಿಯಂತ್ರಿಸಲು ನೀವು ಕ್ಲೆನ್ಸರ್‌ ಆಗಿ ಬಳಸಬಹುದು.

*ಒಣ ಕಿತ್ತಳೆ ಸಿಪ್ಪೆಯ ಪುಡಿ ಮತ್ತು ಮಜ್ಜಿಗೆಯನ್ನು ಮಿಕ್ಸ್‌ ಮಾಡಿ ಹಚ್ಚುವುದರಿಂದ ಮುಖದಲ್ಲಿರುವ ಕಲೆಗಳನ್ನು ಹೋಗಲಾಡಿಸಬಹುದು. ಇದನ್ನು ಹಿಸುಕಿದ ಪಪ್ಪಾಯಿ ಅಥವಾ ಟೊಮೆಟೊಗಳೊಂದಿಗೆ ಬೆರೆಸಿ, ನಿಮ್ಮ ಚರ್ಮಕ್ಕೆ ಹಚ್ಚಿರಿ ಒಣಗಿದ ನಂತರ ತೊಳೆಯಿರಿ. ಇದು ನಿಮ್ಮ ಚರ್ಮದ ಮೇಲೆ ಬಿಸಿಲಿನ ಹಾನಿಯನ್ನು ಕಡಿಮೆ ಮಾಡುತ್ತದೆ.

*ಅರಶಿನ, ಮುಲ್ತಾನಿ ಮಿಟ್ಟಿ ಯೊಂದಿಗೆ ಮಜ್ಜಿಗೆ ಮಿಶ್ರ ಮಾಡಿ ಮುಖಕ್ಕೆ ಹಚ್ಚಿಕೊಂಡು ಸ್ಕ್ರಬ್ ಮಾಡಿ ಮತ್ತು ಸಾಮಾನ್ಯ ನೀರಿನಿಂದ ತೊಳೆಯಿರಿ. 

 *ಮಜ್ಜಿಗೆ, ಜೇನುತುಪ್ಪ ಮತ್ತು ತಾಜಾ ಅಲೋವೆರಾ ಜೆಲ್ ಅನ್ನು ಮಿಕ್ಸ್‌ ಮಾಡಿ ಮತ್ತು ನಯವಾದ ಪೇಸ್ಟ್ ತಯಾರಿಸಿ ರೋಸ್‌ ವಾಟರ್‌ನೊಂದಿಗೆ ಮುಖಕ್ಕೆ ಹಚ್ಚಿ. ಒಣಗಿದ ನಂತರ ತೊಳೆಯಿರಿ.

Author:

share
No Reviews