ಚಿಕ್ಕಬಳ್ಳಾಪುರ:
ವೀಕೆಂಡ್ ನಲ್ಲಿ ಡ್ರಿಂಕ್ ಅಂಡ್ ಡ್ರೈವ್ ಪ್ರಕರಣಗಳು ಹೆಚ್ಚಾಗಿದ್ದು, ಅಪಘಾತಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸರು ಡ್ರಿಂಕ್ ಅಂಡ್ ಡ್ರೈವ್ ಮಾಡೋರಿಗೆ ಪಾಠ ಕಲಿಸಲು ಮುಂದಾಗಿದ್ದಾರೆ. ಮದ್ಯಪಾನ ಪ್ರಿಯರು ಕೆಲಸ ಮುಗಿಸಕೊಂಡು ಮನೆಗೆ ಹೋಗುವಾಗ ನೈಂಟಿ, ಪುಲ್ ಬಾಟಲ್ ಹಾಕಿಕೊಂಡು ಅಡ್ಡಾದಿಡ್ಡಿ ವಾಹನ ಚಾಲನೆ ಮಾಡಿ ಅಪಘಾತಗಳಿಗೆ ಕಾರಣರಾಗುತ್ತಿದ್ದಾರೆ. ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರ ಸಂಚಾರಿ ಪೋಲಿಸ್ ಠಾಣೆಯ ಪಿಎಸ್ಐ ಮಂಜುಳಾ ನೇತೃತ್ವದ ತಂಡ ನಿನ್ನೆ ರಾತ್ರಿ ಚಿಕ್ಕಬಳ್ಳಾಪುರ ನಗರದ ಶನಿಮಹಾತ್ಮ ದೇವಾಲಯದ ಮುಂಬಾಗ ಡ್ರಿಂಕ್ ಅಂಡ್ ಡ್ರೈವ್ ಅನ್ನು ಚೆಕ್ ಮಾಡಲು ಫೀಲ್ಡ್‌ಗೆ ಇಳಿದಿದ್ದಾರೆ.
ಇನ್ನೂ ಶನಿಮಹಾತ್ಮ ದೇವಾಲಯದ ಮುಂದೆ ಬ್ಯಾರಿಕೆಡ್ ಅಡ್ಡ ಗಟ್ಟಿ ಡ್ರಿಂಕ್ ಅಂಡ್ ಡ್ರೈವ್ ಕೇಸ್ ಗಳನ್ನು ಹಾಕುತ್ತಿದ್ರೋ ವಿಚಾರ ತಿಳಿದು ಎಣ್ಣೆ ಪ್ರಿಯರು ಪೊಲೀಸರಿಂದ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ರು. ಇನ್ನ ಒಂದೊಷ್ಟು ಜನ ಮೀಟರ್ ಪೈಪ್ ನಲ್ಲಿ ಊದಿ ಅಂದ್ರೆ.. ಮೀಟರ್ ಪೈಪ್ ನಲ್ಲಿ ಸರಿಯಾಗಿ ಊದದೆ ಡ್ರಾಮ ಮಾಡಿಕೊಂಡಿದ್ದರು.. ಪೋಲಿಸರಿಗೆ ಮಾತ್ರ ಅವರಿಂದ ಊದಿಸುವುದೆ ದೊಡ್ಡ ತಲೆನೋವಾಗಿತ್ತು..
ಇನ್ನೂ ಒಂದಷ್ಟು ಜನ ಸರಿಯಾಗಿ ಊದಿ ಎಣ್ಣೆ ಇಲ್ಲ ಅಂತ ಬಂದ್ರೆ ಇನ್ನೊಂದಷ್ಟು ಜನ ಕಂಠಪೂರ್ತಿ ಕುಡಿದು ಪೋಲಿಸರ ಬಳಿ ಸಿಲುಕಿ ಪೈನ್ ಕಟ್ಟಿ ಹೋಗಿದ್ದಾರೆ...