ಬೆಂಗಳೂರು : ಪಬ್ ನ ಬಾಗಿಲು ಮುರಿದು ಪಿಸ್ತೂಲ್ ತೋರಿಸಿ ಕಳ್ಳತನ

ಬೆಂಗಳೂರು : 

ಅಪರಿಚಿತ ಕಳ್ಳನೋರ್ವ ಬೆಳಗಿನ ಜಾವ ಸುಮಾರಿಗೆ ಬೆಂಗಳೂರಿನ ಸುಬ್ರಹ್ಮಣ್ಯನಗರ ಠಾಣಾ ವ್ಯಾಪ್ತಿಯ ರಾಜಾಜಿನಗರದಲ್ಲಿರುವ ಜೊಮೆಟ್ರಿ ಬ್ರೇವರಿ ಪಬ್‌ ಗೆ ನುಗ್ಗಿ ಪಿಸ್ತೂಲ್‌ ತೋರಿಸಿ ಅಂದಾಜು 50 ರಿಂದ 60 ಸಾವಿರ ರೂಪಾಯಿ ನಗದು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

ಬೆಳಗಿನ ಜಾವ 4 ಗಂಟೆ ಸುಮಾರಿಗೆ ಪಬ್‌ ನ ಹಿಂಬದಿ ಬಾಗಿಲು ಮುರಿದು ಕಳ್ಳ ಒಳಗಡೆ ಹೋಗಿದ್ದಾನೆ. ಒಳನುಗ್ಗಿದ ಕಳ್ಳ ಪಿಸ್ತೂಲ್ ಹಿಡಿದು 3ನೇ ಮಹಡಿಯಲ್ಲಿರುವ ಪಬ್‌ನ ಕಚೇರಿ ಪ್ರವೇಶಿಸಿದ್ದಾನೆ. ಬಳಿಕ ಪಬ್‌ ನಲ್ಲಿದ್ದ ಹಣವನ್ನು ದೋಚಿ ಬಾಗಿಲುಗಳನ್ನು ಮುಚ್ಚಿ ಹೊರ ಹೋಗಿರುವಂತಹ ಘಟನೆ ನಡೆದಿದೆ. 

ಇನ್ನು ಮಾಹಿತಿ ಆಧರಿಸಿ ತಕ್ಷಣಕ್ಕೆ ಸ್ಥಳಕ್ಕೆ ಆಗಮಿಸಿದ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಮತ್ತು ಕ್ವಿಕ್ ರೆಸ್ಪಾನ್ಸ್ ಟೀಂ ಅವರು ಪಬ್‌ ಸುತ್ತುವರೆದು ಸಂಪೂರ್ಣವಾಗಿ ತಪಾಸಣೆಗೊಳಿಸಿದ್ದಾರೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್‌ ಆಯುಕ್ತ ವಿಕಾಸ್‌ ಕುಮಾರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಈ ಸಂಬಂಧ ಪಬ್ ಮ್ಯಾನೇಜರ್‌ ಪೊಲೀಸರಿಗೆ ದೂರು ನೀಡಿದ್ದು, ಪಬ್ ನಲ್ಲಿರುವ ಸಿಸಿ ಕ್ಯಾಮರಾಗಳನ್ನು ಪೊಲೀಸರು ಬ್ಲಾಕ್‌ ಮಾಡಿದ್ದು. ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.  

 

Author:

...
Sushmitha N

Copy Editor

prajashakthi tv

share
No Reviews