Bangalore : ಬಹುಭಾಷಾ ನಟ ಶೈನ್‌ ಟಾಮ್‌ ಕಾರು ಅಪಘಾತ

BANGALORE : ಬಹುಭಾಷಾ ನಟ , ಕೇರಳದ ತ್ರಿಶೂರ್‌ನ ಶೈನ್ ಟಾಮ್ ಚಾಕೊ ಅವರು ಕಾರು ಅಪಘಾತವಾಗಿದ್ದು, ಅವರ ತಂದೆ ಅಪಘಾತದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಧರ್ಮಪುರಿ ಜಿಲ್ಲೆಯ ಪಾಲಕೋಡ್ ಬಳಿ ನಿಂತಿದ್ದ ಟ್ರಕ್‌ಗೆ ನಟ ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ.

41 ವರ್ಷದ ನಟ ಶೈನ್ ಟಾಮ್ ಚಾಕೊ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ. ಕೂಡಲೇ ನಟ ಶೈನ್ ಟಾಮ್ ಚಾಕೊ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನಟ ಶೈನ್​ ತಮ್ಮ ಕುಟುಂಬಸ್ಥರ ಜೊತೆಗೆ ತಂದೆಯ ವೈದ್ಯಕೀಯ ತಪಾಸಣೆಗಾಗಿ ಕಾರಿನಲ್ಲಿ ತ್ರಿಶೂರ್‌ನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಇದೇ ವೇಳೆ ಧರ್ಮಪುರಿ ಜಿಲ್ಲೆಯ ಪಾಲಕೋಡ್‌ನ ಪರೈಯೂರ್ ಬಳಿ ಚಾಲಕ 42 ವರ್ಷದ ಅನಿಸ್ ಅವರ ನಿಯಂತ್ರಣ ತಪ್ಪಿ ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ಸದ್ಯ ಶೈನ್ ಟಾಮ್ ಚಾಲೋ ಹಾಗೂ ತಾಯಿಗೆ ಧರ್ಮಪುರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಟ ಡಾಕು ಮಹರಾಜ್, ದಸರಾ, ರಾಬಿನ್ ಹುಡ್, ಬೀಸ್ಟ್ ಸೇರಿದಂತೆ ಹಲವು ತೆಲುಗು, ತಮಿಳು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

 

Author:

...
Sushmitha N

Copy Editor

prajashakthi tv

share
No Reviews