ಬೆಂಗಳೂರು: ಮಾರ್ಚ್ 5 ರಂದು ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ

ಬೆಂಗಳೂರು:

ಬೆಂಗಳೂರಿನಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿ ಅನುದಾನ ವರ್ಗಾವಣೆ ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಸರ್ಕಾರವು ಮಾರ್ಚ್‌ 5 ರಂದು ಪ್ರತಿಭಟನೆಯನ್ನು ನಡೆಸಲು ತೀರ್ಮಾನಿಸಿದೆ.

ರಾಜ್ಯ ಸರ್ಕಾರವು SC ST ಗೆ ಮೀಸಲಿಟ್ಟಂತಹ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿದ್ದು, ಅನುದಾನ ವರ್ಗಾವಣೆ ವಿರೋಧಿಸಿ ಬಿಜೆಪಿ ಸರ್ಕಾರ ಪ್ರತಿಭಟನೆಯನ್ನು ಮಾಡಲು ಮುಂದಾಗಿದೆ. ಕಾಂಗ್ರೇಸ್‌ ನವರು ಬೇರೆ ಬೇರೆ ಗ್ಯಾರಂಟಿಗಳಿಗಾಗಿ NCEP- TSP ನಿಗದಿ ಪಡಿಸಿದ ಅನುದಾನ ಬಳಕೆ ಮಾಡಿಕೊಳ್ಳುತ್ತಿದ್ದು, ಹೀಗಾಗಿ ಈ ಕುರಿತು ನಾಳೆ ಶಾಸಕರ ಭವನದಲ್ಲಿ ಹೋರಾಟದ ರೂಪುರೇಷೆ ಬಗ್ಗೆ ದಲಿತ ಸಂಘಟನೆಗಳ ಮುಖಂಡರುಗಳ ಜೊತೆ ಬಿಜೆಪಿ ನಾಯಕರು ದುಂಡು ಮೇಜಿನ ಮಹತ್ವದ ಸಭೆಯನ್ನು ಹಮ್ಮಿಕೊಂಡಿದ್ದಾರೆ.

NCEP- TSP ನಿಗದಿ ಪಡಿಸಿದ ಅನುದಾನವನ್ನು ಗ್ಯಾರಂಟಿಗಳಿಗಾಗಿ ವರ್ಗಾವಣೆ ಮಾಡಬಾರದೆಂದು ಈ ಬೃಹತ್‌ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ.

Author:

...
Editor

ManyaSoft Admin

Ads in Post
share
No Reviews