BANGALORE: ನಗರದ ಆಸ್ತಿ ಮಾಲೀಕರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೊಸ ನಿಯಮ ಜಾರಿ ಮಾಡಿದ್ದು, ಜುಲೈ 1ರಿಂದ ಕಟ್ಟಡ ನಕ್ಷೆ ಮಂಜೂರಿಗೆ ಇ-ಖಾತಾ ಕಡ್ಡಾಯವಾಗಲಿದೆ. ಈ ಸಂಬಂಧ ಬಿಬಿಎಂಪಿ ಇದೀಗ ಅಧಿಕೃತ ಆದೇಶ ಹೊರಡಿಸಿದೆ.
ಈ ಹಿಂದೆ ಆಸ್ತಿ ಮಾಲೀಕರಿಗೆ ಇ-ಖಾತಾ ಮಾಡಿಸಲು ಸೂಚನೆ ನೀಡಲಾಗಿತ್ತು. ಆದರೆ ಈಗಿನಿಂದ ಯಾವುದೇ ಕಟ್ಟಡ ಯೋಜನೆ ಮಂಜೂರಿಗಾಗಿ ಸಲ್ಲಿಸುವ ಅರ್ಜಿಗೆ ಇ-ಖಾತಾ ಇರಲೇಬೇಕು ಎಂಬ ಹೊಸ ನಿಯಮ ಜಾರಿಗೆ ಬರಲಿದೆ. ಈ ಕ್ರಮ ಆಸ್ತಿ ದಾಖಲೆಗಳಲ್ಲಿ ಪಾರದರ್ಶಕತೆ ಹಾಗೂ ವ್ಯವಸ್ಥಿತ ನಗರ ಯೋಜನೆಗೆ ಸಹಾಯಕವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಮುಂದೆ ಆನ್‌ಲೈನ್‌ನಲ್ಲಿ ನಕ್ಷೆ (Sanctioned Plan) ಪಡೆಯುವುದು, ಇಂಜಿನಿಯರಿಂಗ್ ವಿಭಾಗದಲ್ಲಿ ಅರ್ಜಿ ಸಲ್ಲಿಸುವುದು ಹಾಗೂ ಇತರ ಅನುಮತಿಗಳಿಗೂ ಇ-ಖಾತಾ ಕಡ್ಡಾಯವಾಗುತ್ತದೆ. ಈ ತಂತ್ರಜ್ಞಾನ ಆಧಾರಿತ ಕ್ರಮದಿಂದ ಭ್ರಷ್ಟಾಚಾರ ನಿಯಂತ್ರಣ ಹಾಗೂ ಭೂ ಸೌಲಭ್ಯಗಳ ಸರಿಯಾದ ದಾಖಲಾತಿಗೆ ದಾರಿ ಮಾಡಿಕೊಡಲಿದೆ ಎಂಬ ನಿರೀಕ್ಷೆ ಇದೆ.