ಬೆಂಗಳೂರು: ಅಖಿಲ ಭಾರತ ಪೊಲೀಸ್ ಡ್ಯೂಟಿಯಲ್ಲಿ ಚಿನ್ನದ ಪದಕ ಪಡೆದ ಬೈಶಾ

ಬೈಶಾ ಎಂಬ ಶ್ವಾನಕ್ಕೆ ಚಿನ್ನದ ಪದಕವನ್ನು ನೀಡಿ ಸನ್ಮಾನಿಸಿರುವುದು.
ಬೈಶಾ ಎಂಬ ಶ್ವಾನಕ್ಕೆ ಚಿನ್ನದ ಪದಕವನ್ನು ನೀಡಿ ಸನ್ಮಾನಿಸಿರುವುದು.
ಬೆಂಗಳೂರು ನಗರ

ಬೆಂಗಳೂರು:

ಜಾರ್ಖಂಡ್ ನ  ರಾಂಚಿಯಲ್ಲಿ ನಡೆದ ಅಖಿಲ ಭಾರತ ಪೊಲೀಸ್ ಡ್ಯೂಟಿ ಮೀಟ್ ಸ್ಪರ್ದೆಯಲ್ಲಿ ಒಂದು ಶ್ವಾನ ಚಿನ್ನದ ಪದಕವನ್ನು ಗೆದ್ದಿದೆ. ನಾರ್ಕೋಟಿಕ್ಸ್  ಡಿಟೆಕ್ಷನ್ ವಿಭಾಗದಲ್ಲಿ CRPPFನ ಬೈಶಾ ಎಂಬ ಶ್ವಾನ ಚಿನ್ನದ ಪದಕವನ್ನು ಪಡೆಯುವುದರ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಚಿನ್ನದ ಪದಕವನ್ನು ಪಡೆದ ಬೈಶಾ ಎಂಬ ಶ್ವಾನಕ್ಕೆ ಯಲಹಂಕದ CRPF  ತರಬೇತಿ ಕೇಂದ್ರದಲ್ಲಿ ಸನ್ಮಾನ ಮಾಡಲಾಯಿತು. ಹಿರಿಯ ಅಧಿಕಾರಿಗಳಾದ CRPF ನ ಐಜಿಪಿ ಟಿ.ವಿಕ್ರಂ ರವವರು ಅಭಿನಂದನೆ ಸಲ್ಲಿಸಲಾಯ್ತು. ಅಲ್ಲದೇ ಬೈಶಾ ಸೇರಿದಂತೆ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ವಿವಿಧ ಶ್ವಾನಗಳಿಗೂ ಸನ್ಮಾನ ಮಾಡಲಾಯಿತು.

ಇನ್ನು ಬೈಶಾ ಶ್ವಾನವು ನಾರ್ಕೋಟಿಕ್ಸ್ ಸ್ಪೋಟಕ ಪತ್ತೆ ಮಾಡುವಲ್ಲಿ ವಿಶೇಷ ಪರಿಣಿತಿ ಹೊಂದಿದೆ. ಮೂರು ತಿಂಗಳ ವಿಶೇಷ ಕಠಿಣ ತರಬೇತಿಯ ನಂತರ ಜಾರ್ಖಂಡ್‌ನ ರಾಂಚಿಯಲ್ಲಿ ನಡೆದ ಅಖಿಲ ಪೊಲೀಸ್‌ ಡ್ಯೂಟಿ ಮೀಟ್‌ ಸ್ಪರ್ಧೆಯಲ್ಲಿ ಶ್ವಾನಗಳು ಭಾಗಿಯಾಗಿದ್ವು. ಅಲ್ಲದೇ ಶ್ವಾನಗಳಿಗೆ ತರಬೇತಿ ನೀಡಿದ ಕೆ 9 ವಿಭಾಗದ ಸಿ ಆರ್ ಪಿ ಎಪ್ ಸಿಬ್ಬಂದಿಯನ್ನು ಕೂಡ ಇದೇ ವೇಳೆ ಸನ್ಮಾನಿಸಲಾಯಿತು.

Author:

share
No Reviews