ಪುಣ್ಯ ಕ್ಷೇತ್ರಗಳ ನದಿ ತೀರದಲ್ಲಿ ಶಾಂಪೂ, ಸೋಪು ಮಾರಾಟ ಬ್ಯಾನ್

ನದಿ ತೀರದಲ್ಲಿ ಶಾಂಪೂ, ಸೋಪು  ನಿಷೇಧ
ನದಿ ತೀರದಲ್ಲಿ ಶಾಂಪೂ, ಸೋಪು ನಿಷೇಧ
ರಾಜ್ಯ

ರಾಜ್ಯ: 

ರಾಜ್ಯದ ಪುಣ್ಯ ಕ್ಷೇತ್ರಗಳ ನದಿ ತೀರದಲ್ಲಿ ಶಾಂಪೂ ಹಾಗೂ ಸೋಪುಗಳ ಮಾರಾಟ ನಿಷೇಧಿಸಿದ ಅರಣ್ಯ ಮತ್ತು ಪರಿಸರ ಇಲಾಖೆ. ನದಿ ತೀರಗಳಲ್ಲಿ ಸೋಪು ಮತ್ತು ಶಾಂಪೂಗಳ ಬಳಕೆ ಹೆಚ್ಚಾಗಿದ್ದು, ಸ್ನಾನ ಮಾಡಿದ ನಂತರ ಅರ್ಧಂಬರ್ಧ ಖಾಲಿಯಾದ ಸೋಪುಗಳನ್ನು ಕವರ್‌ಗಳಲ್ಲಿ ಹಾಕಿ ನದಿಯಲ್ಲೇ ಬಿಡುತ್ತಿದ್ದಾರೆ. ಇದರಿಂದ ನದಿ ನೀರಿನಲ್ಲಿ ಮಾಲಿನ್ಯ ಹೆಚ್ಚಾಗುತ್ತಿದೆ. ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಅರಣ್ಯ ಮತ್ತು ಪರಿಸರ ಇಲಾಖೆ ಈ ಕ್ರಮ ಕೈಗೊಂಡಿದೆ.

ನದಿಗಳಲ್ಲಿ ಶಾಂಪೂ,ಸೋಪು ವಿಸರ್ಜಿಸದಂತೆ ಕಟ್ಟುನಿಟ್ಟಿನ ಸೂಚನೆಯನ್ನು ಪರಿಸರ ಮತ್ತು ಅರಣ್ಯ ಇಲಾಖೆ ಸಚಿವ ಈಶ್ವರ್‌ ಖಂಡ್ರೆ ನೀಡಿದ್ದಾರೆ. ಪುಣ್ಯ ಕ್ಷೇತ್ರಗಳ ನದಿ ತೀರದಲ್ಲಿ ಸೋಪು ಹಾಗೂ ಶಾಂಪೂವಿನ ಬಳಕೆ ಹೆಚ್ಚಾಗ್ತಾಯಿದೆ. ಸ್ನಾನದ ನಂತರ ಶಾಂಪೂ ಹಾಗೂ ಸೋಪಿನ ಖಾಲಿ ಕವರ್‌ಗಳು ನದಿ ನೀರನ್ನು ಸೇರುತ್ತಿದೆ. ಇದರಿಂದ ನದಿ ನೀರಿನಲ್ಲಿ ಮಾಲಿನ್ಯ ಹೆಚ್ಚ್ಳವಾಗಿ ಜಲಚರಗಳಿಗೆ ಕಂಟಕ ಉಂಟಾಗುತ್ತಿದೆ. ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪರಿಸರ ಇಲಾಖೆ ಮತ್ತು ಅರಣ್ಯ ಇಲಾಖೆ ಮಹತ್ವದ ಆದೇಶವನ್ನು ಹೊರಡಿಸಿದೆ.

ನದಿ ದಡಗಳಲ್ಲಿ ಸೋಪು ಹಾಗೂ ಶಾಂಪೂ ಮಾರಾಟ ಮಾಡದಂತೆ ನಿಷೇಧ ಹೇರಲಾಗಿದೆ. ಭಕ್ತರು ತಮ್ಮ ವಸ್ತುಗಳನ್ನು ನದಿಗಳಲ್ಲಿ ವಿಸರ್ಜಿಸದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಆದೇಶ ಹೊರಡಿಸಿದ್ದಾರೆ.

 

 

 

Author:

...
Sub Editor

ManyaSoft Admin

Ads in Post
share
No Reviews