TUMAKURU: ನಾಳೆ ತುಮಕೂರಿನಲ್ಲಿ ಆಟೋ ಚಾಲಕರಿಂದ ಪ್ರತಿಭಟನೆಗೆ ಕರೆ

ತುಮಕೂರು: 

ತುಮಕೂರು ನಗರಾದ್ಯಂತ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆ ನೂರಾರು ಆಟೋ ಚಾಲಕರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಲಿದ್ದಾರೆ. ನಗರದಲ್ಲಿ ಹೊಸದಾಗಿ ಆಟೋ ಪರವಾನಗಿ ನೀಡದಂತೆ, ನಗರದಲ್ಲಿ ಅನಧಿಕೃತವಾಗಿ ಚಲಿಸುತ್ತಿರೋ ಬೈಕ್‌, ಟ್ಯಾಕ್ಸಿಗಳ ವಿರುದ್ಧ ಕಾನೂನು ರೀತಿಯ  ಕ್ರಮ ಕೈಗೊಳ್ಳುವಂತೆ  ಹಾಗೂ ಆಟೋ ನಿಲ್ದಾಣಗಳ ಪುನರ್‌ ನಿರ್ಮಾಣಕ್ಕೆ ಬೇಡಿಕೆ ಈಡೇರಿಕೆ ಆಗ್ರಹಿಸಿ ಆಟೋ ಚಾಲಕರ ಸಂಘದಿಂದ ಪ್ರತಿಭಟನೆಗೆ ಕರೆ ನೀಡಿದ್ದು, ನಾಳೆ ನಗರದಲ್ಲಿ ಆಟೋ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ,

ನಾಳೆ ನಗರದ ಮಾಹನಗರ ಪಾಲಿಕೆ ಆವರಣದ ಅಂಬೇಡ್ಕರ್‌ ಪ್ರತಿಮೆ ಬಳಿ ನೂರಾರು ಆಟೋ ಚಾಲಕರು ಪ್ರತಿಭಟನೆ ನಡೆಸಲಿದ್ದಾರೆ. ಮಹಾನಗರ ಪಾಲಿಕೆ ಮುಂಭಾಗದಿಂದ ಡಿಸಿ ಕಚೇರಿವರೆಗೂ ಆಟೋ ಚಾಲಕರ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ಡಿಸಿಗೆ ಮನವಿ ಪತ್ರ ಸಲ್ಲಿಸಲಿದ್ದಾರೆ. ಆಟೋ ಚಾಲಕರ ಪ್ರತಿಭಟನೆಯಿಂದಾಗಿ ನಾಳೆ ಬಹುತೇಕ ಆಟೋಗಳು ಸಂಚಾರ ಮಾಡದಿರಲು ನಿರ್ಧಾರ ಮಾಡಲಾಗಿದೆ. ಆಟೋ ಚಾಲಕರ ದಿಢೀರ್‌ ಪ್ರತಿಭಟನೆಯಿಂದಾಗಿ ನಗರದಲ್ಲಿ ನಾಳೆ ಆಟೋ ಓಡಾಡದಲ್ಲಿ ವ್ಯತ್ಯಯ ಉಂಟಾಗಲಿದೆ. ಪ್ರತಿಭಟನೆ ಬಗ್ಗೆ ಆಟೋ ಸಮಿತಿ ಅಧ್ಯಕ್ಷ ಪ್ರತಾಪ್‌ ಮದಕರಿ ಪ್ರತಿಕ್ರಿಯೆ ನೀಡಿದ್ದು, ತುಮಕೂರು ನಗರದಲ್ಲಿ ನಗರ ಸಾರಿಗೆ ಸೇವೆ ಆರಂಭವಾದಾಗಿನಿಂದ ಆಟೋಗಳ ವ್ಯವಹಾರ ಕುಸಿತಗೊಂಡು ಆಟೋ ಚಾಲಕರು ತಮ್ಮ ಕುಟುಂಬ ನಿರ್ವಹಣೆ ಕಷ್ಟ ಆಗ್ತಿದೆ, ನಗರದಲ್ಲಿ ದಿನೇ ದಿನೇ ಆಟೋಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಹೊಸ ಆಟೋಗಳಿಗೆ ಪರವಾನಗಿ ನೀಡದಂತೆ ಆಗ್ರಹಿಸಿದರು.

ಒಟ್ಟಿನಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆ ಆಟೋ ಚಾಲಕರು ಬೀದಿಗಿಳಿದು ಪ್ರತಿಭಟನೆ ನಡೆಸಲಿದ್ದು, ಕೆಲಸಗಳಿಗೆ, ಕಾಲೇಜಿಗೆ ತೆರಳಲು ಆಟೋವನ್ನು ಆಶ್ರಯಿಸಿರೋರು ರೋಡಿಗಿಳಿಯುವ ಮುನ್ನ ಮುಂಜಾಗ್ರತಾ ಕ್ರಮವಹಿಸಿಸೋದು ಉತ್ತಮ. ಇತ್ತ ಆಟೋಗಳಿಲ್ಲದೇ ಬಸ್‌ಗಳು ರಶ್‌ ಆಗಲಿದ್ದು ಜನರು ಅಲರ್ಟ್‌ ಆಗೋದು ಒಳಿತು.

Author:

...
Manjunath

Senior Cameraman

prajashakthi tv

share
No Reviews