KITCHEN TIPS:
ಮಾವಿನಕಾಯಿ ರಸಂ ರೆಸಿಪಿ
ಬೇಕಾಗುವ ಸಾಮಗ್ರಿಗಳು :
ಮಾವಿನಕಾಯಿ– 1
ತೊಗರಿಬೇಳೆ – ಕಾಲು ಕಪ್ (ಬೇಯಿಸಿಕೊಂಡಿದ್ದು)
ತುಪ್ಪ– 1 ಚಮಚ
ಸಾಸಿವೆ – ಅರ್ಧ ಚಮಚ
ಜೀರಿಗೆ – 1 ಟೀ ಚಮಚ
ಕರಿಬೇವು – 5 ರಿಂದ 6
ಹಸಿಮೆಣಸಿನಕಾಯಿ – 2
ಇಂಗು– ಚಿಟಿಕೆ
ಶುಂಠಿ – 1 ಇಂಚು
ಟೊಮೆಟೊ – 1
ಜೀರಿಗೆ ಪುಡಿ– 1 ಚಮಚ
ನಿಂಬೆರಸ– 1 ಚಮಚ
ಕಾಳುಮೆಣಸಿನ ಪುಡಿ – ಚಿಟಿಕೆ
ಅರಿಶಿನ ಪುಡಿ – ಚಿಟಿಕೆ
ದನಿಯಾ ಪುಡಿ– 1 ಚಮಚ
ಬೆಲ್ಲ – 1 ಸಣ್ಣ ತುಂಡು
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು
ಒಣಗಿದ ಮೆಣಸಿನಕಾಯಿ- 1
ಮಾಡುವ ವಿಧಾನ :
ಮಾವಿನಕಾಯಿಯನ್ನು ಚೆನ್ನಾಗಿ ತೊಳೆದು ಕುಕ್ಕರ್‌ಗೆ ಹಾಕಿ 2 ಲೋಟ ನೀರು ಸೇರಿಸಿ 5 ರಿಂದ 6 ವಿಶಲ್ ಕೂಗಿಸಿ. ನಂತರ ಮಾವಿನಕಾಯಿ ಆರಿದ ಮೇಲೆ ಸಿಪ್ಪೆ ಹಾಗೂ ಗೊರಟೆ ತೆಗೆದು ಮಾವಿನ ಪಲ್ಪ್ ಅನ್ನ ತೆಗೆದು ಮಿಕ್ಸರ್ ಜಾರ್'ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಬಳಿಕ ತೊಗರಿಬೇಳೆಯನ್ನು ನುಣ್ಣಗೆ ಬೇಯಿಸಿಕೊಳ್ಳಿ. ಒಂದು ಪ್ಯಾನ್‌ಗೆ ತುಪ್ಪ ಹಾಕಿ ಬಿಸಿಯಾದ ಮೇಲೆ ಸಾಸಿವೆ ಹಾಗೂ ಜೀರಿಗೆ ಹಾಕಿ ಸಿಡಿಸಿ. ಅದಕ್ಕೆ ಇಂಗು, ಕರಿಬೇವು, ಹಸಿಮೆಣಸಿನಕಾಯಿ, ಶುಂಠಿ ಎಲ್ಲವನ್ನೂ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಅದಕ್ಕೆ ಮಾವಿನಕಾಯಿ ತಿರುಳು, ಟೊಮೆಟೊ, ನಿಂಬೆರಸ, ಕಾಳುಮೆಣಸಿನಪುಡಿ, ಅರಿಸಿನ ಪುಡಿ, ಜೀರಿಗೆ ಪುಡಿ, ಬೆಲ್ಲ, ಬೇಯಿಸಿದ ತೊಗರಿಬೇಳೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಅಗತ್ಯವಿದ್ದಷ್ಟು ನೀರು ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಹೆಚ್ಚಿದ ಕೊತ್ತಂಬರಿ ಸೊಪ್ಪು ಉದುರಿಸಿ. ರುಚಿಕರವಾದ ಮಾವಿನಕಾಯಿ ರಸಂ ಸವಿಯಲು ಸಿದ್ಧ.