ಸಿನಿಮಾ : ಮ್ಯಾನೇಜರ್ ಮೇಲೆ ಹಲ್ಲೆ | ನಟ ಉನ್ನಿ ಮುಕುಂದನ್ ವಿರುದ್ಧ FIR

UNNI MUKUNDAN : ಮಲಯಾಳಂ ಚಿತ್ರರಂಗದ ಖ್ಯಾತ ನಟ ಉನ್ನಿ ಮುಕುಂದನ್ ಇದೀಗ ವಿವಾದದಲ್ಲಿ ಸಿಲುಕಿದ್ದಾರೆ. ಕೊಚ್ಚಿಯ ಇನ್ಫೋ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಹಲ್ಲೆ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉನ್ನಿ ಮುಕುಂದನ್ ವಿರುದ್ಧ ಮ್ಯಾನೇಜರ್ ವಿಪಿನ್ ಕುಮಾರ್‌ ದೂರು ನೀಡಿದ್ದಾರೆ. ಅವರು ನಟ ಟೋವಿನೋ ಥಾಮಸ್ ಅಭಿನಯದ ‘ನರಿವೆಟ್ಟ’ ಚಿತ್ರದ ಬಗ್ಗೆ ಫೇಸ್ಬುಕ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕೆ, ಉನ್ನಿ ತಮಗೆ ಕಪಾಳಮೋಕ್ಷ ಮಾಡಿದಲ್ಲದೆ, ಅವಾಚ್ಯ ಶಬ್ದಗಳಲ್ಲಿ ನಿಂದನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

"ನಾನು ಅನೇಕ ಸಿನಿಮಾಗಳಿಗೆ ಪಿಆರ್ ಆಗಿ ಕೆಲಸ ಮಾಡಿದ್ದೇನೆ. 'ನರಿವೆಟ್ಟ'ಗೆ ಪ್ರಚಾರ ಮಾಡುವ ಸಂದರ್ಭ, ಫೇಸ್ಬುಕ್‌ನಲ್ಲಿ ಪೋಸ್ಟ್ ಹಾಕಿದ್ದನ್ನು ಉನ್ನಿಗೆ ಇಷ್ಟವಾಗಲಿಲ್ಲ. ಮೇ 26ರಂದು ತಮ್ಮ ಫ್ಲಾಟ್ ಪಾರ್ಕಿಂಗ್ ಏರಿಯಾದಲ್ಲಿ ಕರೆದು ಹಲ್ಲೆ ನಡೆಸಿದರು" ಎಂದು ವಿಪಿನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಕುರಿತು ಮಲಯಾಳಂ ಚಿತ್ರರಂಗದ ಕಲಾವಿದರ ಸಂಘಕ್ಕೂ ಮ್ಯಾನೇಜರ್ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಉನ್ನಿ ಮುಕುಂದನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Author:

...
Keerthana J

Copy Editor

prajashakthi tv

share
No Reviews