SIRA : ಶಿರಾ ನಗರಸಭೆ ಅಧಿಕಾರಿಗಳು ಕೆಲಸ ಮಾಡ್ತಿಲ್ವಾ? | ನಗರಸಭೆ ಅಧ್ಯಕ್ಷರ ಮನೆ ಮುಂದೆಯೇ ಬಿದ್ದಿದೆ ರಾಶಿ ರಾಶಿ ಕಸ

SIRA NEWS : ಶಿರಾ ನಗರ ಸಭೆ ಅಧಿಕಾರಿ ನಗರ ವ್ಯಾಪ್ತಿಗೆ ಬರುವ ವಾರ್ಡ್‌ಗಳ ಅಭಿವೃದ್ಧಿ ವಿಚಾರದಲ್ಲಿ ಕೈಚೆಲ್ಲಿ ಕೂತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದಕ್ಕೆ ಪೂರಕವಾಗುವಂತೆ ನಗರದ ವಾರ್ಡ್‌ಗಳಲ್ಲಿ ಕಸದ ಸಮಸ್ಯೆ ದಿನದಿಂದ ದಿನಕ್ಕೆ ಜಾಸ್ತಿ ಆಗ್ತಿದೆ. ನಗರದ ಬಹುತೇಕ ಭಾಗಗಳಲ್ಲಿ ರಸ್ತೆ ಅಕ್ಕ- ಪಕ್ಕದಲ್ಲೇ ಕಸವನ್ನು ಎಸೆಯುತ್ತಿದ್ದು, ಕಸ ಕೊಳೆತು ಗಬ್ಬು ನಾರುವಂತಹ ಸ್ಥಿತಿ ನಿರ್ಮಾಣ ಆಗಿದೆ, ವಿಪರ್ಯಾಸ ಅಂದ್ರೆ ನಗರಸಭೆ ಅಧ್ಯಕ್ಷರ ಮನೆಯ ರಸ್ತೆಯಲ್ಲೇ ಚರಂಡಿಯಲ್ಲಿ, ರಸ್ತೆಯ ಅಕ್ಕಪಕ್ಕದಲ್ಲಿ ಕಸದ ರಾಶಿ ತುಂಬಿದ್ದು, ದುರ್ನಾತ ಬೀರುತ್ತಿದೆ.

ಶಿರಾ ನಗರ ವ್ಯಾಪ್ತಿಯ 17 ನೇ ವಾರ್ಡ್‌ನಲ್ಲಿ ನಗರಸಭೆ ಅಧ್ಯಕ್ಷೆ ಮನೆ ಇದ್ದು, ಅವರ ಮನೆ ಮುಂದೆ ಇರೋ ರಸ್ತೆ ಹಾಗೂ ಚರಂಡಿಯಲ್ಲಿ ರಾಶಿ ರಾಶಿ ಕಸ ಬಿದ್ದಿದೆ. ಸುಮಾರು ದಿನಗಳಿಂದ ಚರಂಡಿ ಕಟ್ಟಿಕೊಂಡಿದ್ದು ಕೊಳೆತು ಗಬ್ಬು ನಾತ ಬೀರುತ್ತಿದ್ದು ಅಕ್ಕ ಪಕ್ಕದ ಮನೆಯವರು ಮೂಗು ಮುಚ್ಚಿಕೊಂಡು ಓಡಾಡುವ ದುಸ್ಥಿತಿ ಇದೆ. ಇನ್ನು ನಗರಸಭೆ ಅಧ್ಯಕ್ಷರಾಗಿದ್ರು ಕೂಡ ಸಿಬ್ಬಂದಿಯಿಂದ ಕ್ಲೀನ್‌ ಮಾಡಿಸುವ ಕೆಲಸಕ್ಕೆ ಮುಂದಾಗ್ತಾ ಇಲ್ಲ ಎಂದು ಸಾರ್ವಜನಿಕರು ಅಧಿಕಾರಿಗಳಿಗೆ ಹಿಡಿಶಾಪ ಹಾಕ್ತಿದ್ದಾರೆ.

ಇನ್ನು ಅಧ್ಯಕ್ಷರ ಮನೆ ಶಿರಾದಿಂದ ಮಧುಗಿರಿಗೆ ಹೋಗುವ ಹೈವೇ ಆಗಿದ್ದು, ಅಕ್ಕ ಪಕ್ಕದ ಮನೆಯವರು, ಅಂಗಡಿಯವರು, ಅಪಾರ್ಟ್‌ಮೆಂಟ್‌ನವರು ಕಸದ ತಂದು ಸುರಿಯೋದ್ರಿಂದ ಕಸದ ಸಮಸ್ಯೆ ಹೆಚ್ಚಾಗಿದೆ. ಒಂದ್ಕಡೆ ಜನರು ಕಸವನ್ನು ರಸ್ತೆಯ ಬದಿಯೇ ಕಸ ಡಂಬಿಂಕ್‌ ಯಾರ್ಡ್‌ ಮಾಡಿಕೊಂಡಿದ್ದು, ಕಸವನ್ನು ತಂದು ಸುರಿದು ಹೋಗ್ತಾ ಇರೋದ್ರಿಂದ ಕಸದ ಸಮಸ್ಯೆ ಹೆಚ್ಚಾಗಿರೋದು ಒಂದ್ಕಡೆ ಆದ್ರೆ, ಕಸ ಬಿದಿದ್ರು ಸ್ವತಃ ಅಧ್ಯಕ್ಷರಾಗಿದ್ರು ಕಸವನ್ನು ಎತ್ತಿಸುವ ಕೆಲಸ ಮಾಡದಿರೋದು ಬೇಸರದ ಸಂಗತಿಯಾಗಿದೆ. ನಗರಸಭೆ ಅಧ್ಯಕ್ಷರ ಮನೆ ಮುಂದೆಯೇ ಈ ರೀತಿಯ ಸಮಸ್ಯೆ ಆದ್ರೆ ಇನ್ನು ನಗರದ ಇತರೇ ವಾರ್ಡ್ಗಳ ಸ್ಥಿತಿ ಹೇಗಿರಬಹುದು ಅನ್ನೋದಕ್ಕೆ ಕೈಕನ್ನಡಿಯಾಗಿದೆ.

Author:

...
Keerthana J

Copy Editor

prajashakthi tv

share
No Reviews