ಕನ್ನಡ ಕಿರುತರೆಯಲ್ಲಿ ಮಿಂಚುತ್ತಿರುವ ನಟಿ ನಿರೂಪಕಿ ಅನು ಶ್ರೀ ಕೊನೆಗೂ ತಮ್ಮ ಮದುವೆ ಬಗ್ಗೆ ಫ್ಯಾನ್ಸ್ ಗೆ ಸಿಹಿ ಸುದ್ದಿ ನೀಡಿದ್ದಾರೆ. ಹೌದು ಆಗಾಗ ಅನುಶ್ರೀ ಮದುವೆ ಬಗ್ಗೆ ಸುದ್ದಿ ಆಗುತ್ತಲೇ ಇತ್ತು. ಮದುವೆ ಬಗ್ಗೆ ಎಲ್ಲೂ ಸಹ ಮಾತನಾಡದ ನಿರೂಪಕಿ ಇದೀಗ ಫ್ಯಾನ್ಸ್ ಗೆ ಬಿಗ್ ಅಪ್ಡೇಟ್ ಕೊಟ್ಟಿದ್ದಾರೆ.
ಇನ್ನು ಅನುಶ್ರೀ ಅವರ ಮದುವೆ ಯಾವಾಗ ಎನ್ನುವ ಪ್ರಶ್ನೆ ಆಗಾಗ ಕೇಳಿ ಬರುತ್ತಲೇ ಇತ್ತು. ಸೋಷಿಯಲ್ ಮೀಡಿಯಾದಲ್ಲಿ ಅನುಶ್ರೀ ಅವರ ಮದುವೆ ಫಿಕ್ಸ್ ಆಗಿದೆ ಎಂಬ ಕೆಲವೊಂದು ಪೋಸ್ಟ್ಗಳು ಹರಿದಾಡುತ್ತಲೇ ಇರುತ್ತವೆ. ಆದ್ರೆ ಈ ಹಿಂದೆ ನಿರೂಪಕಿ ಮಾರ್ಚ್ ತಿಂಗಳಿನಲ್ಲಿ ಸಿಹಿ ಸುದ್ದಿ ಕೊಡುವುದಾಗಿ ಹೇಳಿಕೊಂಡಿದ್ದರು. ಅಲ್ಲದೇ 2025ರ ಒಳಗೆ ಮದುವೆ ಆಗೋದಾಗಿ ತಿಳಿಸಿದ್ರು.
ಇದೇ ಮೊದಲ ಬಾರಿಗೆ ನಿರೂಪಕಿ ಅನುಶ್ರೀ. ವಿದ್ಯಾಪತಿ ಸಿನಿಮಾ ನಟ ನಾಗಭೂಷಣ್ ಇನ್ಸ್ಟಾಗ್ರಾಮ್ ಲೈವ್ನಲ್ಲಿ ಕೇಳಿದ ಪ್ರಶ್ನೆಗೆ ಅನುಶ್ರೀ ಉತ್ತರಿಸಿದ್ದಾರೆ. ಇದೇ ವರ್ಷ ಮದುವೆ ಆಗ್ತೀನಿ ಎಂದು ಹೇಳುವ ಮೂಲಕ ಸಿಂಗಲ್ ಲೈಫ್ಗೆ ಗುಡ್ ಬೈ ಸೂಚನೆ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಅನುಶ್ರೀ ಮದುವೆ ವಿಷಯ ಕೇಳಿ ಅವರ ಫ್ಯಾನ್ಸ್ ಅಂತೂ ಫುಲ್ ಖುಷಿ ಆಗಿದ್ದಾರೆ.