BOLLYWOOD : 29ನೇ ವಯಸ್ಸಿನಲ್ಲೇ ಮದುವೆ ಆಗಿದ್ದು ಏಕೆ… ಕಾರಣ ಹೇಳಿದ ಅನುಷ್ಕಾ

MOVIE NEWS : ಐಪಿಎಲ್ 2025ನೇ ಆವೃತ್ತಿಯಲ್ಲಿ ಕೊನೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಟ್ರೋಫಿ ಗೆದ್ದು, ಕೋಟಿ ಅಭಿಮಾನಿಗಳ ಕನಸು ನನಸು ಮಾಡಿದೆ. ಈ ಗೆಲುವಿನ ಆಘಾತ ಇನ್ನೂ ಕಡಿಮೆಯಾಗಿಲ್ಲ. ತಂಡದ ತಾರೆ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಸದ್ಯ ಕ್ರಿಕೆಟ್‌ನಿಂದ ಸ್ವಲ್ಪ ವಿರಾಮ ತೆಗೆದುಕೊಂಡು ಕುಟುಂಬದೊಂದಿಗೆ ಗುಣಮಟ್ಟದ ಸಮಯ ಕಳೆಯುತ್ತಿದ್ದಾರೆ.

ಇದರ ನಡುವೆ, ವಿರಾಟ್ ಕೊಹ್ಲಿ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಒಂದು ಅತ್ಯಂತ ಖಾಸಗಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ತಾನು 29ನೇ ವಯಸ್ಸಿನಲ್ಲಿ ಮದುವೆ ಏಕೆ ಮಾಡಿಕೊಂಡೆ ಎಂಬುದರ ಬಗ್ಗೆ ರಿವೀಲ್‌ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅನುಷ್ಕಾ ಶರ್ಮಾ, ನಾನು ಸಿನಿಮಾಗಳಲ್ಲಿ ಒಳ್ಳೆಯ ಸ್ಥಾನದಲ್ಲಿ ಇರುವಾಗಲೇ ವಿರಾಟ್​ ಕೊಹ್ಲಿನ ವಿವಾಹ ಆಗಿದ್ದೇನೆ. ಬಾಲಿವುಡ್​ ನಟಿಯರು ಈ ಹಂತದಲ್ಲೇ ತಮ್ಮ ಕರಿಯರ್​ ಅನ್ನು ಇನ್ನಷ್ಟು ಚೆನ್ನಾಗಿ ಮಾಡಿಕೊಳ್ಳುತ್ತಾರೆ. ಆದರೆ ನಾನು 29ನೇ ವಯಸ್ಸಿಗೆ ಮದುವೆ ಆಗಿರುವುದಕ್ಕೆ ಕಾರಣ ಪ್ರೀತಿ. ವೃತ್ತಿಜೀವನದ ಉತ್ತುಂಗದಲ್ಲಿದ್ದರೂ ಪ್ರೀತಿಗಾಗಿ ಬೇಗ ಮದುವೆಯಾದೆ ಎಂದು ಅನುಷ್ಕಾ ಶರ್ಮಾ ಹೇಳಿದ್ದಾರೆ.

ಅವರು ತಾವು ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ವಿವಾಹ ಮಾಡಿಕೊಂಡಿದ್ದು, ಬಹುತೇಕ ನಟಿಯರು ಆ ಸಮಯದಲ್ಲಿ ವೈಯಕ್ತಿಕ ಜೀವನವನ್ನು ತಡೆಹಿಡಿದು, ಸಿನಿಮಾಗೆ ಮೊದಲ ಪ್ರಾಮುಖ್ಯತೆ ನೀಡುತ್ತಾರೆ ಎಂದು ಹೇಳಿದರು. ಆದರೆ ಅವರು ಮಾತ್ರ ಪ್ರೀತಿಗೆ ಮೊದಲ ಸ್ಥಾನ ನೀಡಿ 2017ರಲ್ಲಿ ವಿರಾಟ್ ಕೊಹ್ಲಿ ಅವರ ಕೈ ಹಿಡಿದರು.

ವಿರಾಟ್ ಮತ್ತು ಅನುಷ್ಕಾ ನಡುವೆ ಪ್ರೀತಿ ಇಡೀ ದೇಶದ ಗಮನ ಸೆಳೆದಿತ್ತು. ಇವರಿಬ್ಬರು ಮೊದಲಿಗೆ ಪರಿಚಯವಾಗಿದ್ದು ಜಾಹೀರಾತು ಶೂಟಿಂಗ್ ವೇಳೆ. ಈ ಸಂದರ್ಭದಿಂದಲೇ ಇವರ ನಡುವೆ ಸ್ನೇಹ, ನಂತರ ಪ್ರೀತಿ ಬೆಳೆದು 2017 ಡಿಸೆಂಬರ್ 11ರಂದು ಇಟಲಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇಂದಿಗೆ ಈ ಸ್ಟಾರ್ ಜೋಡಿಗೆ ವಮಿಕಾ ಹಾಗೂ ಅಕಾಯ್ ಎಂಬ ಇಬ್ಬರು ಮಕ್ಕಳಿದ್ದಾರೆ. ಮಕ್ಕಳನ್ನು ಪಬ್ಲಿಕ್‌ಗಾಗಿಯೇ ತೋರಿಸದಂತೆ, ವೈಯಕ್ತಿಕತೆ ಕಾಪಾಡುತ್ತಿದ್ದಾರೆ.

ಅನುಷ್ಕಾ ಶರ್ಮಾ ತಮ್ಮ ಜೀವನದ ನಿರ್ಣಯವನ್ನು ಪ್ರೀತಿಯಿಂದ ಮಾಡಿದ ರೀತಿಯು ಸಾವಿರಾರು ಅಭಿಮಾನಿಗಳಿಗೆ ಪ್ರೇರಣೆಯಾಗಿದೆ. ಕೇವಲ ವೃತ್ತಿಜೀವನವಲ್ಲ, ವೈಯಕ್ತಿಕ ಜೀವನದಲ್ಲೂ ಸಮತೋಲನ ಹೇಗೆ ಇರಬೇಕು ಎಂಬುದಕ್ಕೆ ಈ ಜೋಡಿ ಉತ್ತಮ ಉದಾಹರಣೆ.

 

Author:

...
Keerthana J

Copy Editor

prajashakthi tv

share
No Reviews