ಮಧುಗಿರಿ : ಇತರೆ ರೈತರಿಗೆ ಮಾದರಿಯಾದ ವೃದ್ಧ ರೈತ ದಂಪತಿ

ಮಧುಗಿರಿ: ಇತ್ತೀಚಿನ ದಿನಗಳಲ್ಲಿ ನೀರಾವರಿ ಇದ್ರು ಕೂಡ ವ್ಯವಸಾಯ ಮಾಡದೇ ಅಡಿಕೆ ಗಿಡಗಳ ಅಥವಾ ಇತರೆ ಬೇಸಾಯದ ಮೊರೆ ಹೋಗೋ ಕಾಲದಲ್ಲಿ, ಮಳೆ ಆಶ್ರಿತ ಪ್ರದೇಶದಲ್ಲಿ ವೃದ್ಧ ದಂಪತಿ 5 ಕ್ವಿಂಟಾಲ್‌ ತೊಗರಿ ಬೆಳೆದು ಇತರೆ ರೈತರಿಗೆ ಮಾದರಿಯಾಗಿದ್ದಾರೆ. ಹೌದು ಈ ವೃದ್ಧ ದಂಪತಿ ಬರದ ನಾಡು ಅಂತಾನೇ ಖ್ಯಾತಿ ಪಡೆದಿರೋ ಮಧುಗಿರಿಯವರು.. ಮಳೆಯನ್ನೇ ನಂಬಿ ಕೃಷಿ ಮಾಡಿ ಬರೋಬ್ಬರಿ 5 ಕ್ವಿಂಟಾಲ್‌ ತೊಗರಿ ಬೆಳೆದು ಸಾಧನೆ ಮಾಡಿದ್ದಾರೆ.

ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಕೆಂಪಾಪುರ ಗ್ರಾಮದ 78 ವರ್ಷದ ಲಕ್ಷ್ಮಣ ರೆಡ್ಡಿ ಹಾಗೂ 70 ವರ್ಷದ ಶಾರದಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಮಳೆಯ ನೀರನ್ನೇ ನಂಬಿ ಸುಮಾರು 5 ಕ್ವಿಂಟಾಲ್‌ ತೊಗರಿ ಬೆಳೆಯನ್ನು ಬೆಳೆದಿದ್ದಾರೆ. ಈ ವೃದ್ಧ ರೈತ ದಂಪತಿ ಯಾವುದೇ ರಾಸಾಯನಿಕ ಬಳಸದೇ ಸಾಂಪ್ರಾದಾಯಿಕವಾಗಿ ಕೃಷಿಯನ್ನು ಮಾಡಿರೋದು ವಿಶೇಷವಾಗಿದೆ.

ಇನ್ನು ಇವರು ಕೃಷಿ ಇಲಾಖೆಯಲ್ಲಿ ಬಿತ್ತನೆ ತೊಗರಿ ಬೀಜ ಪಡೆಯುವಾಗ ಇವರನ್ನು ಕಂಡು ನಕ್ಕವರೇ ಹೆಚ್ಚು. ಕೆಲವು ಆತ್ಮೀಯರು ಹುಚ್ಚು ಕೆಲಸ ಮಾಡುತ್ತೀರಾ ಅಂತಾ ಕೂಡ ಲೇವಡಿ ಮಾಡಿದ್ದರು ಆದರೆ, ಇದ್ಯಾವದಕ್ಕೂ ತಲೆಕೆಡಿಸಕೊಳ್ಳದ ರೈತ ದಂಪತಿ ತೊಗರಿ ಬೆಳೆಯಲು ಮುಂದಾದ್ರಂತೆ. ಸಾಲದಕ್ಕೆ ಬೀಜ ಬಿತ್ತುವಾಗ ಅಕ್ಕಪಕ್ಕದ ಹೊಲಗಳ ರೈತರು ಕೂಡ ನಕ್ಕರಂತೆ ಆದ್ರೆ ಛಲಬಿಡದಂತೆ ತಮ್ಮ ಕೆಲಸ ಮಾಡಿದ್ದಕ್ಕೆ ಇಂದು ಫಲ ಕೊಟ್ಟಿದೆ ಎಂದು ರೈತ ಲಕ್ಷ್ಮಣ ರೆಡ್ಡಿ ಸಂತಸ ವ್ಯಕ್ತಪಡಿಸಿದ್ದಾರೆ. ಸರ್ಕಾರದಿಂದ ಕೃಷಿ ಇಲಾಖೆಯಲ್ಲಿ ರೈತರಿಗೆ ನೀಡುವ ಬಿತ್ತನೆ ಬೀಜವನ್ನು ಬಳಸಿಕೊಂಡ ತೊಗರಿ ಬೆಳೆದಿದ್ದು, ಉತ್ತಮ ಬೆಳೆ ಬಂದ ಹಿನ್ನೆಲೆಯಲ್ಲಿ ತೋಗರಿಯನ್ನು ಹುಳ ಬೀಳದಂತೆ ಸಂಗ್ರಹಣೆ ಮಾಡಲು ಬೇವಿನ ಎಲೆ, ಬೋದಿ ಮಿಶ್ರ ಮಾಡಿ ಪ್ಲಾಸ್ಟಿಕ್ ಚೀಲಗಳಲ್ಲಿ ಸಂಗ್ರಹಣೆ ಮಾಡಿದ್ದಾಂತೆ.

ದೇವರ ದಯೆ ಜನರ ಕೊಂಕು ಮಾತುಗಳ ನಡುವೆ  ಧೈರ್ಯ ಮಾಡಿ ಬಿತ್ತನೆ ಮಾಡಿದೆ. ಮಳೆರಾಯನ ಕರುಣೆಯಿಂದ ಅನಿರೀಕ್ಷಿತ ಯಶಸ್ಸು ಸಿಕ್ಕಿದೆ ಎಂದು ಶಾರದಮ್ಮ ಸಂತಸ ವ್ಯಕ್ತಪಡಿಸಿದ್ರು.

ಒಟ್ನಲ್ಲಿ ಮಳೆ ಆಶ್ರಿತ ಪ್ರದೇಶದಲ್ಲಿ ಕಷ್ಟಪಟ್ಟು ಬೇಸಾಯ ಮಾಡಿ, ಇತರೆ ರೈತರಿಗೆ ಮಾದರಿಯಾದ ರೈತ ದಂಪತಿಗೆ ಊರಿನ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸ್ತಾ ಇದ್ದಾರೆ.

 

 

Author:

...
Keerthana J

Copy Editor

prajashakthi tv

share
No Reviews