ಬೆಂಗಳೂರು :
ರಾಜ್ಯದಲ್ಲಿ ನಂದಿನಿ ಹಾಲು ಹಾಗೂ ಮದರ್ ಡೈರಿ ಹಾಲಿನ ದರವನ್ನು ಹೆಚ್ಚಳ ಮಾಡಿದ್ದು, ಅಮುಲ್ ಹಾಲಿನ ದರವನ್ನು ಹೆಚ್ಚಳ ಮಾತ್ರ ಮಾಡಿರಲಿಲ್ಲ. ಇದೀಗ ಅಮುಲ್ ಹಾಲಿನ ದರದ ಮೇಲೆ ಎರಡು ರೂಪಾಯಿ ಏರಿಕೆ ಮಾಡುವ ಮೂಲಕ ಜನರ ನಾಲಿಗೆ ಸುಡುವಂತೆ ಮಾಡಿದೆ.
ಗುಜರಾತ್‌ನ ಫೇಮಸ್ ಡೈರಿ ಬ್ರಾಂಡ್ ಅಮುಲ್ ಹಾಲಿನ ದರದಲ್ಲಿ ಪರಿಷ್ಕರಣೆ ಮಾಡಲಾಗಿದ್ದು, ಪ್ರತಿ ಲೀಟರ್ ಮೇಲೆ 2 ರೂಪಾಯಿ ಹೆಚ್ಚಳ ಮಾಡಿದೆ. ಪರಿಷ್ಕೃತ ದರ ಇಂದಿನಿಂದ ಜಾರಿಗೆ ತಂದಿದ್ದು, ಬೆಲೆ ಏರಿಕೆಯಿಂದ ಜನರಿಗೆ ಮತ್ತೊಂದು ಬರೆ ಎಳೆದಂತಾಗಿದೆ. ಅಮುಲ್ ಸ್ಟ್ಯಾಂಡರ್ಡ್, ಅಮುಲ್ ಬಫೆಲೋ ಅಮುಲ್ ಗೋಲ್ಡ್, ಅಮುಲ್ ಸ್ಲಿಮ್, ಅಮುಲ್ ಚಾಯ್‌ಮಜಾ, ಅಮುಲ್ ತಾಜಾ ಸೇರಿ ಎಲ್ಲ ಬಗೆಯ ಹಾಲಿನ ಪ್ಯಾಕೇಟ್ ಮೇಲೆ ದರ ಏರಿಕೆ ಅನ್ವಯ ಆಗಲಿದೆ.
ನಂದಿನಿ ಹಾಲಿನ ದರ ಏರಿಕೆಯಿಂದ ತತ್ತರಿಸಿದ್ದ ಜನರು, ಕೆಲವು ಮಂದಿ ಗ್ರಾಹಕರು ನಂದಿನಿ ಬಿಟ್ಟು ಅಮುಲ್‌ನತ್ತ ವಾಲಿದರು, ಆದರೆ ಇದೀಗ ಅಮುಲ್ ಹಾಲಿನ ದರವೂ ಕೂಡ ಹೆಚ್ಚಳವಾಗಿದ್ದು, ಗ್ರಾಹಕರಿಗೆ ಶಾಕ್ ಕೊಟ್ಟಂತಾಗಿದೆ. ಇನ್ನು ಅಮುಲ್ ಹಾಲಿನ ದರ ಏರಿಕೆಯಿಂದಾಗಿ ಅಮುಲ್ ಹಾಲಿನ ಉತ್ಪನ್ನಗಳ ಮೇಲೂ ಬೆಲೆ ಏರಿಕೆ ಬಿಸಿ ತಟ್ಟುವ ಸಾಧ್ಯತೆ ಇದೆ. ಅಲ್ಲೇ ಟೀ ಶಾಪ್‌ಗಳಲ್ಲಿ ಟೀ-ಕಾಫಿ ದರವೂ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.