ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ ಅನಾರೋಗ್ಯದ ಹಿನ್ನೆಲೆ ತುಳುನಾಡಿನ ದೈವದ ಮೊರೆ ಹೋಗಿದ್ದಾರೆ. ಇತ್ತೀಚೆಗೆ ವಿಶಾಲ್ಗೆ ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗಿದ್ದು, ಚೆನ್ನೈನಲ್ಲಿ ನಡೆದ ಮದಗಜರಾಜ ಎಂಬ ಸಿನಿಮಾದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ವಿಶಾಲ್ ಗೆ ಅನಾರೋಗ್ಯ ಇರೋದು ಹೊರ ಜಗತ್ತಿಗೆ ಗೊತ್ತಾಗಿದ್ದು, ಕೈ ಶೇಖ್ ಆಗುತ್ತಿದ್ದ ವಿಡಿಯೋ ಫುಲ್ ವೈರಲ್ ಆಗಿತ್ತು. ಅಲ್ಲದೇ ಸಿನಿಮಾದಲ್ಲಿರೋ ದೃಶ್ಯವನ್ನು ಇಮಿಟೇಟ್ ಮಾಡ್ತಾ ಇದ್ದಾರೆ ಅಂತಾ ಕೆಲವರು ಭಾವಿಸಿದ್ದರು. ಬಳಿಕ ಅವರಿಗೆ ಅನಾರೋಗ್ಯ ಇದೆ ಎಂದು ಮಾಹಿತಿ ಹೊರ ಬಂದ ಮೇಲೆ ಫ್ಯಾನ್ಸ್ ಅಂತೂ ಬೇಸರದಲ್ಲಿದ್ದರು. ಇದೀಗ ಆರೋಗ್ಯ ಸುಧಾರಣೆಗಾಗಿ ಕರ್ನಾಟಕಕ್ಕೆ ಕಾಲಿಟ್ಟಿದ್ದು, ಕರಾವಳಿಯ ತುಳು ನಾಡ ದೈವದ ಮೊರೆ ಹೋಗಿದ್ದಾರೆ.
ನಿನ್ನೆ ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ತಾಲೂಕಿನ ಹರಿಪಾದೆಯ ಧರ್ಮದೈವ ಜಾರಂದಾಯ ದೇವಸ್ಥಾನಕ್ಕೆ ನಟ ವಿಶಾಲ್ ಭೇಟಿ ನೀಡಿದ್ದಾರೆ. ಪಕ್ಷಿಕೆರೆ ಸಮೀಪದ ಜಾರಂದಾಯ ವಾರ್ಷಿಕ ನೇಮ ನಡೆದಿದ್ದು, ಕಾರ್ಯಕ್ರಮದಲ್ಲಿ ನಟ ವಿಶಾಲ್ ಭಾಗಿಯಾಗಿದ್ದರು. ದೈವಕ್ಕೆ ಮಲ್ಲಿಗೆ ಹೂವು ಅರ್ಪಿಸಿ, ಸುಮಾರು ಮೂರು ಗಂಟೆಗಳ ಕಾಲ ಭಕ್ತಿಯಿಂದ ಜಾರಂದಾಯ ನೇಮವನ್ನು ವೀಕ್ಷಿಸಿದರು. ದೈವಕ್ಕೆ ಪ್ರಾರ್ಥಿಸಿದ ವಿಶಾಲ್ ಆರೋಗ್ಯ ಗುಣಮುಖವಾದ ಮೇಲೆ ಶ್ರೀ ಕ್ಷೇತ್ರದಲ್ಲಿ ತುಲಭಾರ ಸೇವೆ ನೀಡುವುದಾಗಿ ನಟ ವಿಶಾಲ್ ಹರಕೆ ಹೊತ್ತಿದ್ದಾರೆ. ವಿಶಾಲ್ ಸಮಸ್ಯೆ ಆಲಿಸಿದ ಜಾರಂದಾಯ ದೈವ, ಕಣ್ಣೀರು ಹಾಕಬೇಡ ನಾನಿದ್ದೇನೆ ಎಂದು ದೈವ ಅಭಯ ನೀಡಿದೆ. ಇದಾದ ಬಳಿಕ ಆರೋಗ್ಯ ಸಂಪೂರ್ಣ ಗುಣಮುಖವಾಗಿ ಬಂದು ಶ್ರೀ ಕ್ಷೇತ್ರದಲ್ಲಿ ತುಲಭಾರ ಸೇವೆ ಕೊಡಲು ಅರ್ಚಕರು ಸೂಚಿಸಿದ್ದಾರೆ.