ವಿಜಯಪುರ : ವಿಜಯಪುರದಲ್ಲಿ ಮದುವೆ ಸಂಭ್ರಮದಲ್ಲಿ ಡಾನ್ಸ್ ಮಾಡುತ್ತಿದ್ದ ಯುವಕನಿಗೆ ಹೃದಯಾಘಾತ

ವಿಜಯಪುರ : ಇತ್ತೀಚೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಹೃದಯಾಘಾತದಿಂದ ಯೌವನದಲ್ಲೇ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿರುವುದರ ನಡುವೆ ವಿಜಯಪುರದಲ್ಲಿ ಮತ್ತೊಂದು ದುಃಖದ ಘಟನೆ ನಡೆದಿದೆ. ಮದುವೆ ಸಂಭ್ರಮದಲ್ಲಿ ಡಾನ್ಸ್ ಮಾಡುತ್ತಿದ್ದ ಯುವಕನೊಬ್ಬ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ವಿಜಯಪುರ ನಗರದ ಚಪ್ಪರಬಂದ ಕಾಲೋನಿಯಲ್ಲಿ ವರದಿಯಾಗಿದೆ.

28 ವರ್ಷದ ಮಹಮ್ಮದ್ ಪೈಗಂಬರ್ ಗಂಗನಹಳ್ಳಿ ಮೃತ ದುರ್ದೈವಿಯಾಗಿದ್ದಾರೆ.  ಅಲೋಮಿನಿಯಂ  ಕಿಟಕಿ ಹಾಗೂ ಬಾಗಿಲು ಫಿಟಿಂಗ್ ಕೆಲಸ ಮಾಡುತ್ತಿದ್ದ ಪೈಗಂಬರ್, ಸಂಬಂಧಿಕರ ಮದುವೆಯಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದರು. ಡಾನ್ಸ್ ಮಾಡುವಾಗಲೇ ತೀವ್ರ ಹೃದಯಾಘಾತದಿಂದ ಅಚಾನಕ್ ನೆಲಕ್ಕುರುಳಿದ ಅವರು, ತಕ್ಷಣವೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಈ ಘಟನೆ ಗೋಳಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಯುವಕನ ಪೋಷಕರು ಮತ್ತು ಕುಟುಂಬಸ್ಥರು ದುಃಖದಲ್ಲಿ ಮುಳುಗಿದ್ದು, ಸ್ಥಳೀಯರಲ್ಲಿ ಕೂಡ ಶೋಕದ ಛಾಯೆ ಗೆರೆಯಾಗಿದೆ.

 

Author:

...
Keerthana J

Copy Editor

prajashakthi tv

share
No Reviews