ತುಮಕೂರು:
ಯಾರು ಹೇಗಾದ್ರೂ ಇರಲಿ… ನಾವು ಚೆನ್ನಾಗಿದ್ರೆ ಸಾಕು.. ಈ ಪರಿಸರ ಪ್ರೇಮ ಯಾಕೆ..ಅರಣ್ಯ ರಕ್ಷಣೆ ಯಾಕೆ..ನಮ್ಮ ಮನೆಯೊಂದು ಚೆನ್ನಾಗಿದ್ರೆ ಅಷ್ಟೇ ಸಾಕು ಅನ್ನೋರೇ ಹೆಚ್ಚಿರೋ ಈ ಕಾಲದಲ್ಲಿ ಇಲ್ಲೊಬ್ಬ ತುಮಕೂರಿನ ಯುವಕ ತನ್ನ ಪರಿಸರದ ಮೇಲಿನ ತನ್ನ ವಿಶೇಷ ಕಾಳಜಿ, ಮತ್ತು ಅದರ ಉಳಿವಿಗಾಗಿ ಮಾಡುತ್ತಿರುವ ವಿಶೇಷ ಪ್ರಯತ್ನದ ಮೂಲಕ ಇದೀಗ ಗಮನ ಸೆಳೆದಿದ್ದಾನೆ.
ಪರಿಸರ ಉಳಿವಿನ ಸಂಕಲ್ಪದೊಂದಿಗೆ ಇಡೀ ರಾಜ್ಯಾದ್ಯಂತ ಸೈಕಲ್ ಜಾಥಾ ಮೂಲಕ ಜಾಗೃತಿ ಮೂಡಿಸಲು ಹೊರಟಿದ್ದಾರೆ ತುಮಕೂರು ಅಜ್ಜಗೊಂಡನಹಳ್ಳಿಯ ಈ ವಿಚಿತ್ರ ಪರಿಸರ ಪ್ರೇಮಿ ಯುವಕ ಮಹಾಲಿಂಗಯ್ಯ. ಅರಣ್ಯ ರಕ್ಷಣೆಯ ಉದ್ದೇಶದಿಂದ ಸೈಕಲ್ ಜಾಥಾ ಕೈಗೊಂಡಿರುವ ಮಹಾಲಿಂಗಯ್ಯ, ಇಡೀ ರಾಜ್ಯದಾದ್ಯಂತ ಸಂಚರಿಸಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ಇಂದಿನಿಂದ ತಮ್ಮ ಸೈಕಲ್ ಜಾಥಾವನ್ನ ಆರಂಭಿಸಿರುವ ಮಹಾಲಿಂಗಯ್ಯ, ತುಮಕೂರಿನ ಮೂಲಕವೇ ಜಾಥಾಗಾ ಚಾಲನೆ ನೀಡಿದ್ದಾರೆ. ತಮ್ಮ ಊರಿನಿಂದ ತುಮಕೂರು ಜಿಲ್ಲಾಧಿಕಾರಿ ಕಚೇರಿಯವರೆಗೆ ಸೈಕಲ್‌ನಲ್ಲಿಯೇ ಬಂದು, ಬಳಿಕ ತಹಶೀಲ್ದಾರ್ ಗೆ ಮನವಿ ಸಲ್ಲಿಸುವ ಮೂಲಕ ಜಾಥಾಗೆ ಅಧೀಕೃತ ಚಾಲನೆ ನೀಡಿದ್ರು.
ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಪರಿಸರ ಪ್ರೇಮಿ ಯುವಕ ಮಹಾಲಿಂಗಯ್ಯ, ಪ್ರತೀ ಗ್ರಾಮ ಪಂಚಾಯ್ತಿಗಳಲ್ಲಿ ಅರಣ್ಯ ರಕ್ಷಣೆಗಾಗಿ ಕನಿಷ್ಠ 5 ರಿಂದ 10 ಎಕರೆ ಭೂಮಿಯನ್ನು ಮೀಸಲಿಡಲು ಒತ್ತಾಯಿಸುವುದು ಈ ಜಾಥಾದ ಪ್ರಮುಖ ಉದ್ದೇಶವಾಗಿದೆ. ಇನ್ನು ಕೇಲವ ನೆಪಮಾತ್ರಕ್ಕೆ ಭೂಮಿಯನ್ನ ಮೀಸಲಾಗಿಡದೇ ಅಲ್ಲಿ ಅರಣ್ಯವನ್ನ ಬೆಳೆಸಲು ಸ್ಥಳೀಯ ಸಂಸ್ಥೆಗಳು ಗಮನಹರಿಸಬೇಕು. ಜಾಗತಿಕ ತಾಪಮಾನ ಹೆಚ್ಚುತ್ತಿರುವ ಈ ಹಿನ್ನಲೆಯಲ್ಲಿ, ಪರಿಸರ ಸಂರಕ್ಷಣೆಗೆ ಸರ್ಕಾರ ಹಾಗೂ ಜನಸಾಮಾನ್ಯರು ತಕ್ಷಣವೇ ಕ್ರಮಕೈಗೊಳ್ಳಬೇಕು ಎಂದರು.
ಮಹಾಲಿಂಗಯ್ಯನ ಈ ಕಾರ್ಯಕ್ಕೆ ಹಲವು ಪರಿಸರ ಪ್ರೇಮಿಗಳು ಬೆಂಬಲ ವ್ಯಕ್ತಪಡಿಸಿದ್ದು, ಜಾಥಾ ಆಯಾ ಜಿಲ್ಲೆಗಳಲ್ಲಿ ಹೊಸ ಚೈತನ್ಯ ಮೂಡಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಪ್ರವಾಸವು ರಾಜ್ಯದ ವಿವಿಧ ಜಿಲ್ಲೆಗಳ ಮೂಲಕ ಸಾಗಲಿದ್ದು, ಪ್ರತಿ ಜಿಲ್ಲೆಯಲ್ಲಿ ಸ್ಥಳೀಯ ಜನತೆ, ವಿದ್ಯಾರ್ಥಿಗಳು, ಪರಿಸರ ಕಾರ್ಯಕರ್ತರು ಮತ್ತು ಅಧಿಕಾರಿಗಳಿಗೆ ಜಾಗೃತಿ ಮೂಡಿಸಲು ಈ ಯುವಕ ಮುಂದಾಗಿದ್ದಾನೆ.ಸೈಕಲ್ ಜಾಥಾ ಪ್ರಾರಂಭವಾದ ಮೊದಲ ದಿನವೇ ಹಲವರು ಇದಕ್ಕೆ ಸಾಥ್ ನೀಡಿದ್ದು, ಈ ಯುವಕನ ಒಂದೊಳ್ಳೆ ಪ್ರಯತ್ನಕ್ಕೆ ರಾಜ್ಯಾದ್ಯಂತ ಬೆಂಬಲ ಸಿಗಲಿ ಅನ್ನೋದು ನಿಮ್ಮ ಪ್ರಜಾಶಕ್ತಿ ಟಿವಿಯ ಆಶಯ.